ನವದೆಹಲಿ: ಅಮೆರಿಕದ ಡಿಜಿಟಲ್ ಸರ್ವೀಸಸ್ ಕಂಪನಿ ಬೆಟರ್.ಕಾಮ್ ನ ಸಿಇಒ ವಿಶಾಲ್ ಅಗರ್ ವಾಲ್ ಗಾರ್ಗ್ ಅವರು ತಮ್ಮ ಕಂಪನಿಯ 900 ಉದ್ಯೋಗಿಗಳನ್ನು ಒಂದೇ ಬಾರಿ ಕೆಲಸದಿಂದ ತೆಗೆದುಹಾಕಿರುವುದನ್ನು ಝೂಮ್ ಕಾಲ್ ನಲ್ಲಿಯೇ ಘೋಷಿಸಿದ್ದರು.
ಕಳೆದ ವಾರ ಜೂಮ್ ಮಿಟಿಂಗ್ ನಲ್ಲಿ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿಶಾಲ್ ಅವರು ಜನರ ಟೀಕೆಗೆ ಗುರಿಯಾಗುತ್ತಿದ್ದಾರೆ. ಈ ಹಿನ್ನೆಲೆ ಅವರು ಅಡಮಾನ ಕಂಪನಿಯಲ್ಲಿ ವಜಾ ಮಾಡುವ ಕಾರ್ಯ ನಿರ್ವಹಿಸುವ ರೀತಿಗೆ ಕ್ಷಮೆಯಾಚಿಸಿದ್ದಾರೆ.
ನಾನು ಈ ಸುದ್ದಿಯನ್ನು ಹೇಳುವಾಗ ತುಂಬಾ ಕಷ್ಟವಾಗಿತ್ತು. ಆದರೆ ಈಗ ಕಠಿಣ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ನಾನು ಇದನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಬರೆದು ಕ್ಷಮೆಯನ್ನು ಕೇಳಿದ್ದಾರೆ. ಹಠಾತ್ತನೆ ವಜಾ ಮಾಡಲು ಕಾರಣವೇನು? ಎಂದು ಕೇಳಿದಾಗ, ಮಾರುಕಟ್ಟೆಯ ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯಲ್ಲಿ ಬದಲಾವಣೆಯಿಂದ ಅವರನ್ನು ವಜಾಗೊಳಿಸಲಾಗಿದೆ ಎಂದು ಭಾರತೀಯ-ಅಮೆರಿಕನ್ ಸಿಇಒ ಹೇಳಿದ್ದರು.
PublicNext
09/12/2021 10:56 am