ಜವಳಿ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ದಿ ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ (ಸಿಸಿಐ) ಸಾರ್ವಜನಿಕ ಉದ್ಯಮವಾಗಿದೆ.
ದೇಶಾದ್ಯಂತ 19 ಶಾಖೆಗಳನ್ನು ಹೊಂದಿರುವ ಸಿಸಿಐ ಹತ್ತಿ ಉದ್ಯಮದ ಪ್ರಗತಿಗೆ ಶ್ರಮಿಸುತ್ತಿದೆ. ನೇರ ನೇಮಕಾತಿ ಮೂಲಕ ಖಾಲಿ ಇರುವ 95 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.
ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಬೇಕಿದೆ.
ಹುದ್ದೆ, ಸಂಖ್ಯೆ ವಿವರ
* ಮ್ಯಾನೇಜ್ಮೆಂಟ್ ಟ್ರೇನಿ (ಮಾರ್ಕೇಟಿಂಗ್) – 5
* ಮ್ಯಾನೇಜ್ಮೆಂಟ್ ಟ್ರೇನಿ (ಅಕೌಂಟ್ಸ್) – 6
* ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯುಟೀವ್ – 50
* ಜೂನಿಯರ್ ಅಸಿಸ್ಟೆಂಟ್ (ಜನರಲ್) – 20
* ಜೂನಿಯರ್ ಅಸಿಸ್ಟೆಂಟ್ (ಅಕೌಂಟ್ಸ್) – 14
ವಿದ್ಯಾರ್ಹತೆ: ಬಿಕಾಂ, ಅಗ್ರಿಕಲ್ಚರ್ ಬಿಎಸ್ಸಿ, ಅಗ್ರಿ ಬಿಜಿನೆಸ್ ಮ್ಯಾನೇಜ್ಮೆಂಟ್/ ಕೃಷಿ ಸಂಬಂಧಿತ ವಿಷಯದಲ್ಲಿ ಎಂಬಿಎ, ಸಿಎ/ ಸಿಎಂಎ/ಎಂಎಂಎಸ್/ ಎಂಕಾಂ ಅಥವಾ ತತ್ಸಮಾನ ಶಿಕ್ಷಣ. ಪದವಿಗಳಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು. ಎಸ್ ಸಿ, ಎಸ್ ಟಿ, ಅಂಗವಿಕಲ ಅಭ್ಯರ್ಥಿಗಳಾದಲ್ಲಿ ಕನಿಷ್ಠ ಶೇ.45 ಅಂಕ ಪಡೆದಿರಬೇಕು.
ವಯೋಮಿತಿ: 1.11.2020ಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ಸಾಮಾನ್ಯವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1500 ರೂ. ಎಸ್ ಸಿ, ಎಸ್ ಟಿ, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 7.1.2021
ಮಾಹಿತಿಗೆ:http://www.cotcorp.org.in
PublicNext
18/12/2020 06:55 pm