ಚೆನ್ನೈನಲ್ಲಿರುವ ರಾಷ್ಟ್ರೀಯ ಲ್ಯಾಬೊರೇಟರಿ ಸಿಎಸ್ ಐಆರ್-ಸೆಂಟ್ರಲ್ ಲೆದರ್ ರಿಸರ್ಚ್ ಇನ್ ಸ್ಟಿಟ್ಯೂಟ್ (ಸಿಎಲ್ ಆರ್ ಐ) ನಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸಿಸ್ಟೆಂಟ್ ಹಾಗೂ ಇತರ 31 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.
ಸಿಎಲ್ ಆರ್ ಐನ ವಿವಿಧ ಯೋಜನೆಗಳಿಗೆ ವಿವಿಧ ಹಂತಗಳಲ್ಲಿ ಕೆಲಸ ಮಾಡಲು ಅರ್ಹ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಂತಿಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ / ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
ಹುದ್ದೆ, ಸಂಖ್ಯೆ ವಿವರ
* ಪ್ರಾಜೆಕ್ಟ್ ಅಸೋಸಿಯೇಟ್ ಐಐ - 6
* ಪ್ರಾಜೆಕ್ಟ್ ಅಸೋಸಿಯೇಟ್ ಐ - 18
* ಪ್ರಾಜೆಕ್ಟ್ ಅಸೋಸಿಯೇಟ್ ಲೆವೆಲ್ 1 - 1
* ಪ್ರಾಜೆಕ್ಟ್ ಅಸಿಸ್ಟೆಂಟ್ - 4
* ಸೈಂಟಿಫಿಕ್ ಅಡ್ಮಿನಿಸ್ಟ್ರೇಟೀವ್ ಅಸಿಸ್ಟೆಂಟ್ - 2
ವಿದ್ಯಾರ್ಹತೆ
ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಮೆಡಿಕಲ್ ಲ್ಯಾಬೊರೇಟರಿಯಲ್ಲಿ 3 ವರ್ಷದ ಡಿಪ್ಲೋಮಾ, ಬಯೋಮೆಡಿಕಲ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ ಸ್ಟ್ರುಮೆಂಟೇಷನ್, ಎಲೆಕ್ಟ್ರಾನಿಕ್ಸ್ ಆ್ಯಂಡ ಕಮ್ಯುನಿಕೇಷನ್ ಇಂಜಿನಿಯರಿಂಗ್ ನಲ್ಲಿ ಪದವಿ, ಕಂಪ್ಯೂಟರ್ ಸೈನ್ಸ್/ ಇನ್ಫೋರ್ಮೇಷನ್ ಟೆಕ್ನಾಲಜಿಯಲ್ಲಿ ಬಿ.ಎಸ್ಸಿ, ಬಯೋಪ್ರೊಸೆಸ್ ಇಂಜಿನಿಯರಿಂಗ್, ಕೆಮಿಸ್ಟ್ರಿ, ಆರ್ಗಾನಿಕ್ ಕೆಮಿಸ್ಟ್ರಿ, ಫಿಜಿಕಲ್, ಅನಾಲಿಟಿಕಲ್ ಕೆಮಿಸ್ಟ್ರಿ/ ಬಯೋಕೆಮಿಸ್ಟ್ರಿಯಲ್ಲಿ ಎಂಎಸ್ಸಿ, ಬಯೋಟೆಕ್ನಾಲಜಿ, ಲೆದರ್ ಟೆಕ್ನಾಲಜಿ, ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಇ/ಬಿಟೆಕ್, ಯುಜಿಸಿ ನೆಟ್/ ಗೇಟ್, ಸಿಎಸ್ ಐಆರ್ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ ಶಿಕ್ಷಣ.
ವಯೋಮಿತಿ
ಹುದ್ದೆಗೆ ಅನುಗುಣವಾಗಿ ಗರಿಷ್ಠ 35 ರಿಂದ 50 ವರ್ಷ.
ನೇರ ಸಂದರ್ಶನ:
30.12.2020 ಬೆಳಗ್ಗೆ 9ರಿಂದ ನೇರ ಸಂದರ್ಶನ ನಡೆಯಲಿದ್ದು, 11 ಗಂಟೆ ನಂತರ ಬಂದ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ.
ಸಂದರ್ಶನದ ದಿನ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು
ಅರ್ಜಿ ಸಲ್ಲಿಸಲು ಕೊನೆಯ ದಿನ: 23.12.2020
PublicNext
17/12/2020 05:39 pm