ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆ ಕೋರ್ಸ್ ಮಾಡಿದವರಿಗೆ ಇವತ್ತು ದಿಕ್ಕೇ ತೋಚುತ್ತಿಲ್ಲ: ಏನದು?

ಬಾಗಲಕೋಟೆ- ಅನೇಸ್ತೇಷಿಯಾ ಕೋರ್ಸ್ ಮಾಡಿದವರು ಸದ್ಯ ಕೋಮಾ ಸ್ಥಿತಿಯಲ್ಲಿದ್ದಾರೆ. ಇದೆಲ್ಲದಕ್ಕೂ ಸರ್ಕಾರವೇ ಕಾರಣ. ಯಾಕಂದ್ರೆ ಸರ್ಕಾರವೇ ಮುಂದಾಗಿ ಈ ಕೋರ್ಸನ್ನು ಆರಂಭಿಸಿತ್ತು. ಸುಮಾರು 6ಸಾವಿರ ವಿದ್ಯಾರ್ಥಿಗಳು ಈ ಕೋರ್ಸ್ ಓದಿದ್ದರು. ಆದ್ರೆ ಅವರಲ್ಲಿ ಬಹುತೇಕರಿಗೆ ಉದ್ಯೋಗ ಸಿಗುತ್ತಿಲ್ಲ.

ಆಪರೇಶನ್ ಥಿಯೇಟರ್ ಹಾಗೂ ಅನೆಸ್ತೇಷಿಯಾ ಕೋರ್ಸ್ ಕಲಿತ ಇವರೆಲ್ಲ ಸದ್ಯ ಅತಂತ್ರ ಸ್ಥಿತಿಯಲಿದ್ದಾರೆ. 1997ರಲ್ಲಿಯೇ ಸರ್ಕಾರ ಈ ಕೋರ್ಸ್ ಆರಂಭಿಸಿತ್ತು. ಅಲ್ಲಿಂದ ಇವತ್ತಿನವರೆಗೂ ಸುಮಾರು 6 ಸಾವಿರ ವಿದ್ಯಾರ್ಥಿಗಳು ಈ ಕೋರ್ಸ್ ಅಧ್ಯಯನ ಮಾಡಿದ್ದಾರೆ‌‌. ಈ ಕೋರ್ಸ್ ಅಡಿಯಲ್ಲಿ ಸರ್ಕಾರ ಇದುವರೆಗೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಿಕೊಂಡಿಲ್ಲ. ಹೀಗಾಗಿ ಅತ್ತ ಬೇರೆ ಕೆಲಸ ಮಾಡಲಾಗದೇ, ಇತ್ತ ಕೋರ್ಸ್ ಆಧಾರದ ನೌಕರಿಯೂ ಸಿಗದೇ ಅಭ್ಯರ್ಥಿಗಳು ಜಿಗುಪ್ಸೆಯಾಗಿದ್ದಾರೆ. ಆದ್ರೆ ಆರ್ ಟಿ ಐ ಮೂಲಕ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಕೇಳಿದಾಗ, ಅನೆಸ್ತೇಷಿಯಾ ಪರಿಣತರ ಹುದ್ದೆಗಳ ಅವಶ್ಯಕತೆ ಇದೆ ಎಂದು ವರದಿ ನೀಡಿದ್ದಾರೆ.

ಆದ್ರೆ ಸರ್ಕಾರ ಮಾತ್ರ ಇವರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಕೋರ್ಸ್ ಕಲಿತವರು ಕಳೆದ ಒಂದು 15 ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದಾರೆ.

Edited By : Nagaraj Tulugeri
PublicNext

PublicNext

28/11/2020 09:01 am

Cinque Terre

114.32 K

Cinque Terre

7