ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗ್ಳೂರು ಐಐಎಸ್‌ಸಿನಲ್ಲಿ 85 ಅಡ್ಮಿನಿಸ್ಟ್ರೇಟಿವ್ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯು ಅಡ್ಮಿನಿಸ್ಟ್ರೇಟಿವ್ ಅಸಿಸ್ಟಂಟ್‌ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.

ಆಸಕ್ತಿ ಅಭ್ಯರ್ಥಿಗಳು ಶೇಕಡ.50 ಅಂಕಗಳೊಂದಿಗೆ ಯಾವುದೇ ಪದವಿ ಪಾಸ್‌ ಮಾಡಿರಬೇಕು ಹಾಗೂ ಕಂಪ್ಯೂಟರ್ ಆಪರೇಟಿಂಗ್ ಜ್ಞಾನ ಹೊಂದಿರಬೇಕು.

ವಯೋಮಿತಿ: ದಿನಾಂಕ 7-11-2020ಕ್ಕೆ 26 ವರ್ಷ ವಯೋಮಿತಿ ಮೀರಿರಬಾರದು. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಮೀಸಲಾತಿ: ಸಾಮಾನ್ಯ ವರ್ಗದವರಿಗೆ 37, ಒಬಿಸಿ ಅಭ್ಯರ್ಥಿಗಳಿಗೆ 22, ಎಸ್‌ಸಿ ಅಭ್ಯರ್ಥಿಗಳಿಗೆ 13, ಎಸ್‌ಟಿ ಅಭ್ಯರ್ಥಿಗಳಿಗೆ 5, ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 8 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ವೇತನ ಶ್ರೇಣಿ : ಲೆವೆಲ್ 3 ಬೇಸಿಕ್ ಪೇ 21,700 ರೂ. ಜೊತೆಗೆ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಪೈಕಿ ಶೇ.80 ಅಂಕಗಳನ್ನು ಮತ್ತು ಪದವಿ ಅಂಕಗಳ ಶೇ.20 ಅಂಕಗಳನ್ನು ಆಧರಿಸಿ ಮೆರಿಟ್ ಲಿಸ್ಟ್‌ ಸಿದ್ಧಪಡಿಸಿ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?:

- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.800. ಹಾಗೂ ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.400. ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 07-11-2020 ಆಗಿದ್ದು, ಅರ್ಜಿಯನ್ನು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ವೆಬ್‌ಸೈಟ್‌ hಣಣಠಿs://iisಛಿ.ಚಿಛಿ.iಟಿ/ಠಿosiಣioಟಿs-oಠಿeಟಿ/ ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಸಲ್ಲಿಸಬೇಕು.

Edited By : Vijay Kumar
PublicNext

PublicNext

21/10/2020 07:29 pm

Cinque Terre

79.46 K

Cinque Terre

5