ಲಂಡನ್: ಯುಕೆನ ಬೂಟಲ್‌ನಲ್ಲಿ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ತರಿಸಿಕೊಂಡಿದ್ದ ಬರ್ಗರ್ ಕಿಂಗ್ ಊಟದಲ್ಲಿ ಪೆನ್ಸಿಲ್ ಅನ್ನು ಕಂಡು ಶಾಕ್ ಆಗಿದ್ದಾರೆ. ಬರ್ಗರ್ ಕಿಂಗ್ ಔಟ್‌ಲೆಟ್‌ನ ಸಿಬ್ಬಂದಿ "ಚಿಂತಿಸಬೇಡಿ" ಎಂದು ಹೇಳಿದ ನಂತರ ಲೀನ್ನೆ ಡಾಲಿ ಅವರು ತಮ್ಮ ಬರ್ಗರ್‌ನಲ್ಲಿ ಕಂಡುಕೊಂಡ ಪೆನ್ಸಿಲ್‌ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಈ ಘಟನೆಯು ಉಂಟಾದ ಪರಿಣಾಮಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಮತ್ತು ನಿಮಗೆ ಉಂಟಾದ ಸಮಸ್ಯೆಯ ಬಗ್ಗೆ ತನಿಖೆ ಮಾಡುತ್ತೇವೆ" ಎಂದು ಬರ್ಗರ್ ಕಿಂಗ್ ಔಟ್‌ಲೆಟ್ ವಕ್ತಾರರು ತಿಳಿಸಿದ್ದಾರೆ.
PublicNext
07/10/2022 03:15 pm