ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಬ್ ನಾಡಲ್ಲಿ ಹಿಂದೂ ದೇವಾಲಯ ಉದ್ಘಾಟನೆ

ದುಬೈನಲ್ಲಿ ಹಿಂದೂ ದೇವಾಲಯ ನಿರ್ಮಿಸುವ ಭಾರತೀಯರ ಕನಸ್ಸು ನನಸಾಗಿದೆ.ಇನ್ನು 16 ದೇವತೆಗಳಿರುವ ಹಿಂದೂ ದೇವಾಲಯ ಜೆಬೆಲ್ ಆಲಿ ಎಂಬ ಪ್ರದೇಶದಲ್ಲಿ ನಿರ್ಮಾಣವಾಗಿದೆ.ದುಬೈ ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ಹೊಸ ಹಿಂದೂ ದೇವಾಲಯವನ್ನು ಉದ್ಘಾಟಿಸಿದರು. ಇನ್ನು ಈ ದೇವಾಲಯಕ್ಕೆ ಎಲ್ಲಾ ಧರ್ಮಿಯರಿಗೂ ಪ್ರವೇಶವಿದೆ. 2 ವರ್ಷಗಳ ಅವಧಿಯಲ್ಲಿ ದೇವಾಲಯ ನಿರ್ಮಾಣವಾಗಿದ್ದು ವಿಜಯದಶಮಿ ಹಬ್ಬದ ಒಂದು ದಿನ ಮುಂಚಿತವಾಗಿ ದೇವಾಲಯವನ್ನು ಉದ್ಘಾಟಿಸಲಾಯಿತು.

ಈ ದೇವಾಲಯವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯದ ವಿಸ್ತರಣೆಯಾಗಿದೆ. ಅ.5 ರಿಂದ ದೇವಾಲಯವು ಸಾರ್ವಜನಿಕರ ದರ್ಶನಕ್ಕೆ ತೆರೆದಿರುತ್ತದೆ. ಹಿಂದೂಗಳ ಹಲವು ವರ್ಷದ ಬೇಡಿಕೆಯಂತೆ 2020 ರಲ್ಲಿ ದೇವಾಲಯಕ್ಕೆ ಅಡಿಪಾಯ ಹಾಕಲಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ ದೇವಾಲಯ ನಿರ್ಮಾಣಗೊಂಡಿದೆ.

Edited By : Nirmala Aralikatti
PublicNext

PublicNext

06/10/2022 02:34 pm

Cinque Terre

194 K

Cinque Terre

26

ಸಂಬಂಧಿತ ಸುದ್ದಿ