ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್​ ಸುಟ್ಟರು, ಕೂದಲು ಕತ್ತರಿಸಿಕೊಂಡರು, ಮಹಿಳೆಯರ ಪ್ರತಿಭಟನೆಗೆ ಮುಸ್ಲಿಂ ರಾಷ್ಟ್ರ ಅಲ್ಲೋಲ ಕಲ್ಲೋಲ

(ಇರಾನ್​) ಕುರ್ದಿಸ್ತಾನ್ : ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸದ ಕಾರಣಕ್ಕಾಗಿ ಇರಾನ್​ನಲ್ಲಿ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿ, ವ್ಯಾನ್​ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಮೃತಪಟ್ಟಿದ್ದಳು. ಈ ಘಟನೆಯ ನಂತರ ಇರಾನ್​ನಲ್ಲಿ ಮಹಿಳೆಯರು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕುರ್ದಿಸ್ತಾನ್ ಪ್ರಾಂತ್ಯದ ಮಹ್ಸಾ ಆಮಿನಿ ಎಂಬ 22 ವರ್ಷದ ಯುವತಿ ಪೊಲೀಸರ ದೌರ್ಜನ್ಯಕ್ಕೆ ಬಲಿಯಾದವಳು. ಸಂಬಂಧಿಕರನ್ನು ಭೇಟಿಯಾಗಲು ಆಮಿನಿ ಪಶ್ಚಿಮ ಪ್ರಾಂತ್ಯವಾದ ಕುರ್ದಿಸ್ತಾನದಿಂದ ಇರಾನ್​ನ ರಾಜಧಾನಿ ತೆಹರಾನ್​ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಹಿಳೆಯರ ವಸ್ತ್ರಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಆಕೆಯನ್ನು ಬಂಧಿಸಿ ಹಿಂಸೆ ನೀಡಲಾಗಿತ್ತು. ನಂತರ ಆಕೆ ಮೃತಪಟ್ಟಿದ್ದಳು.

ಈ ಘಟನೆ ನಡೆದಾಗಿಂದಲೂ ಮಹಿಳೆಯರು ಪ್ರತಿಭಟನೆ ಶುರು ಮಾಡಿದ್ದಾರೆ. ಮಹಿಳೆಯರನ್ನು ಬಂಧಿಸಿಟ್ಟಿರುವ ಈ ಹಿಜಾಬ್​, ಸಂಪ್ರದಾಯ ಎಂಬ ಹೆಸರಿನಲ್ಲಿ ಕೂದಲು ಬಿಡುವಂತೆ ಆಗ್ರಹಿಸುವುದು ಎಲ್ಲವೂ ತಪ್ಪು ಎಂದಿರುವ ಮಹಿಳೆಯರು ಬೀದಿಗಿಳಿದು ಹಿಜಾಬ್​ ಕಿತ್ತೆಸೆಯುತ್ತಿದ್ದಾರೆ, ಸಾರ್ವಜನಿಕವಾಗಿಯೇ ಕೂದಲನ್ನು ಕಟ್​ ಮಾಡಿಕೊಳ್ಳುತ್ತಿದ್ದಾರೆ. ಭಾರಿ ಪ್ರಮಾಣದ ಮಹಿಳೆಯರ ಈ ಪ್ರತಿಭಟನೆಗೆ ಮುಸ್ಲಿಂ ರಾಷ್ಟ್ರ ಇರಾನ್​ ಅಲ್ಲೋಲ ಕಲ್ಲೋಲವಾಗಿದೆ.

ಪ್ರತಿಭಟನೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ರಸ್ತೆಯ ನಡುವೆ ಬೆಂಕಿ ಹಾಕಿ ಹಿಜಾಬ್​ ಸುಡುತ್ತಿದ್ದಾರೆ. ನಡುರಸ್ತೆಯಲ್ಲಿ ಕತ್ತರಿ ತೆಗೆದುಕೊಂಡು ಕೂದಲು ಕತ್ತರಿಸಿಕೊಳ್ಳುತ್ತಿರುವ ದೃಶ್ಯ ಇರಾನ್​ನಲ್ಲಿ ಈಗ ಸಾಮಾನ್ಯವಾಗಿದೆ.

ಸದ್ಯ ಇರಾನ್​ನಲ್ಲಿ ಇರುವ ಕಾನೂನಿನ ಅನ್ವಯ ಏಳು ವರ್ಷಕ್ಕಿಂತ ಮೇಲ್ಪಟ್ಟವರು ಹಿಜಾಬ್​ ಧರಿಸಬೇಕು. ಕೂದಲು ಕಾಣದಂತೆ ಸಂಪೂರ್ಣವಾಗಿ ಹಿಜಾಬ್​ ಧರಿಸಿಕೊಳ್ಳಬೇಕು, ಕೂದಲನ್ನು ಕೂಡ ಕತ್ತರಿಸಿಕೊಳ್ಳಬಾರದು ಎಂದಿದೆ. ಕೆಲ ತಿಂಗಳಿನಿಂದಲೇ ಇದರ ವಿರುದ್ಧ ಇರಾನ್​ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇದೀಗ ಯುವತಿಯ ಸಾವಿನ ನಂತರ ಅದು ತೀವ್ರ ಸ್ವರೂಪ ಪಡೆದುಕೊಂಡಿದೆ.

ಸರ್ಕಾರದ ವಿರುದ್ಧ ಅಲ್ಲಿನ ಮಹಿಳೆಯರು ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ಸಂಬಂಧ ಕೆಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರತಿಭಟನಾಕಾರರನ್ನು ಹಿಮ್ಮೆಟ್ಟಲು ಇರಾನ್ ಪಡೆಗಳು ಅಶ್ರುವಾಯುಗಳನ್ನು ಬಳಸುತ್ತಿದ್ದಾರೆ. ಕೆಲವೆಡೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಲಾಗಿದೆ. ಆದರೆ ಯಾವುದಕ್ಕೂ ಮಹಿಳೆಯರು ಜಗ್ಗುತ್ತಿಲ್ಲ.

Edited By : Abhishek Kamoji
PublicNext

PublicNext

19/09/2022 07:55 pm

Cinque Terre

72.18 K

Cinque Terre

11

ಸಂಬಂಧಿತ ಸುದ್ದಿ