ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಕ್ತಪಾತವಿಲ್ಲದೆ ಶೀತಲ ಸಮರ ಮುಕ್ತಾಯಗೊಳಿಸಿದ್ದ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ನಿಧನ

ಮಾಸ್ಕೋ: ರಕ್ತಪಾತವಿಲ್ಲದೆ ಶೀತಲ ಸಮರವನ್ನು ಶಾಂತವಾಗಿಯೇ ಕೊನೆಗೊಳಿಸಿದ್ದ ಸೋವಿಯತ್ ನಾಯಕ, ಯುಎಸ್‌ಎಸ್‌ಆರ್‌ ಮಾಜಿ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ಅವರು ಮಂಗಳವಾರ ತಮ್ಮ 91ನೇ ವಯಸ್ಸಿಗೆ ನಿಧನರಾಗಿದ್ದಾರೆ.

ಗೋರ್ಬಚೇವ್ ಅವರು ಗಂಭೀರವಾದ ಹಾಗೂ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ಸಂಜೆ ನಿಧನರಾದರು ಎಂದು ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆ ತಿಳಿಸಿದೆ.

2ನೇ ಮಹಾಯುದ್ಧದ ನಂತರ ರಷ್ಯಾ ನೇತೃತ್ವದ ಸೋವಿಯತ್ ಒಕ್ಕೂಟ ಹಾಗೂ ಅಮೆರಿಕ ನಡುವೆ ಶೀತಲ ಯುದ್ಧದ ರೂಪದಲ್ಲಿ ತಲೆದೋರಿತ್ತು. ಈ ಸುದೀರ್ಘ ಸಂಘರ್ಷವನ್ನು ಮೈಕೆಲ್ ಗೋರ್​ಬಚೆವ್ ಅವರು ರಕ್ತಪಾತವಿಲ್ಲದೆ ಅಂತ್ಯಗೊಳಿಸಿದ್ದರು.

ತಮ್ಮ 54ನೇ ವರ್ಷದಲ್ಲಿ, ಅಂದರೆ 1985ರಲ್ಲಿ ಸೋವಿಯತ್ ಕಮ್ಯುನಿಸ್ಟ್ ಪಕ್ಷ ಪ್ರಧಾನ ಕಾರ್ಯದರ್ಶಿಯಾದರು ಗೋರ್​ಬಚೆವ್. ಸೋವಿಯತ್ ಒಕ್ಕೂಟದ ವಿವಿಧ ಪ್ರಾಂತ್ಯಗಳಿಗೆ ಸೀಮಿತ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಕೊಡುವ ಕ್ರಮಗಳನ್ನು ಘೋಷಿಸಿದರು. ಆದರೆ ಈ ಸುಧಾರಣಾ ಕ್ರಮಗಳು ನಿಯಂತ್ರಣ ಮೀರಿ ಹೋದವು. ‘ಗ್ಲಾಸ್​ನೊಸ್ಟ್​’ ಎನ್ನುವ ಮುಕ್ತ ಅಭಿವ್ಯಕ್ತಿಯ ಹೊಸ ನೀತಿಯನ್ನು ಆರಂಭಿಸಿದರು. ಇಂಥದ್ದೊಂದು ವ್ಯವಸ್ಥೆ ರಷ್ಯಾದಲ್ಲಿ ಜಾರಿಯಾಗಬಹುದು ಎಂದು ಈ ಮೊದಲು ಊಹಿಸಲೂ ಸಾಧ್ಯವಿರಲಿಲ್ಲ. ಪಕ್ಷ ಮತ್ತು ಸರ್ಕಾರವನ್ನು ಜನರು ಮುಕ್ತವಾಗಿ ಟೀಕಿಸಲು ಈ ನೀತಿಯು ಅವಕಾಶ ಮಾಡಿಕೊಟ್ಟಿತ್ತು. ಆದರೆ ಇದು ರಾಷ್ಟ್ರೀಯವಾದಿಗಳಿಗೆ ಹೊಸ ಧೈರ್ಯ ತುಂಬಿ, ಅವರು ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುವಂತೆ ಮಾಡಿತು. ಲ್ಯಾಟ್​ವಿಯಾ, ಲಿಥುನಿಯಾ, ಈಸ್ಟೊನಿಯಾ ಮತ್ತಿತರರ ಬಾಲ್ಕನ್ ಪ್ರಾಂತ್ಯಗಳಲ್ಲಿ ಸ್ವಾತಂತ್ರ್ಯದ ಬೇಡಿಕೆ ಹೆಚ್ಚಾಯಿತು. ಆಗ ಸೋವಿಯತ್ ಒಕ್ಕೂಟದ ಪತನವನ್ನು ತಮ್ಮಿಂದ ತಡೆಯಲು ಸಾಧ್ಯವಾಗಿರಲಿಲ್ಲ. ಪರಿಣಾಂ ಅವರು ಸೋವಿಯತ್ ಒಕ್ಕೂಟದ ಕೊನೆಯ ಅಧ್ಯಕ್ಷರಾದರು.

Edited By : Vijay Kumar
PublicNext

PublicNext

31/08/2022 11:01 am

Cinque Terre

20.75 K

Cinque Terre

0

ಸಂಬಂಧಿತ ಸುದ್ದಿ