ರಷ್ಯಾ ದಾಳಿಯ ವಿರುದ್ಧ ಉಕ್ರೇನ್ ಸೈನಿಕರು, ನಾಗರಿಕರು ಕಳೆದ 6 ತಿಂಗಳಿನಿಂದ ಹೋರಾಟ ನಡೆಸಿದ್ದಾರೆ. ಈ ಯುದ್ಧದಲ್ಲಿ ಈವರೆಗೂ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಈ ಕಷ್ಟದ ಕ್ಷಣಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿನ್ಸ್ಕಿ ತನ್ನ ದೇಶದ ಜನರೊಂದಿಗೆ ನಿಂತು ವಿಶ್ವದ ಜನರ ಮೆಚ್ಚುಗೆಗೆ ಪಾತ್ರರಾದರು. ಆದರೆ ಈಗ ರಷ್ಯಾ ದಾಳಿಯ ಮಧ್ಯದಲ್ಲೂ ವೊಲೊಡಿಮಿರ್ ಝೆಲೆನ್ಸ್ಕಿ ಪತ್ನಿಯೊಂದಿಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಯುದ್ಧದ ವಿನಾಶದ ನಡುವೆ, ಝೆಲೆನ್ಸ್ಕಿ ಪ್ರಸಿದ್ಧ ಫ್ಯಾಷನ್ ಮ್ಯಾಗಜೀನ್‌ಗಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಯುದ್ಧಭೂಮಿಯ ನಡುವೆಯೇ ಪತ್ನಿ ಒಲೆನಾ ಜತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಈ ಚಿತ್ರಗಳನ್ನು ಒಲೆನಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಸಂತಸದಿಂದ ಹಂಚಿಕೊಂಡಿದ್ದಾರೆ. ವೋಗ್ ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಳ್ಳುವುದು ಅನೇಕ ಜನರ ಕನಸು ಮತ್ತು ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿದೆ. ಈ ಆಸೆ ಈಡೇರಿದೆ ಎಂದು ಒಲೆನಾ ಬರೆದುಕೊಂಡಿದ್ದಾರೆ.
PublicNext
28/07/2022 06:45 pm