ಕೊಲಂಬೊ : ಲಂಕಾಗೆ ಆರ್ಥಿಕ ಬಿಕ್ಕಟ್ಟು, ಜನರ ಹಸಿವಿನ ಸಿಟ್ಟು ಸದ್ಯ ಪ್ರಜೆಗಳ ದಂಗೆಗೆ ಇಡೀ ಸರ್ಕಾರವೇ ಧಗಧಗಿಸಿದೆ. ದೇಶ ಅಧಃ ಪತನಕ್ಕೆ ಜಾರಿದ್ದು, ಅರಾಜಕತೆ ತಾಂಡವವಾಡ್ತಿದೆ.ಸದ್ಯ ರೊಚ್ಚಿಗೆದಿರುವ ಜನರು ಪ್ರಧಾನಿ ಮನೆಗೆ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಧಾನಿ ಮನೆಗೆ ಮುತ್ತಿಗೆ ಹಾಕಿದ್ದಾರೆ. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಅಧಿಕೃತ ನಿವಾಸ `ಟೆಂಪಲ್ ಟ್ರೀ’ ಅನ್ನು ಆಕ್ರಮಿಸಿಕೊಂಡಿರುವ ಪ್ರತಿಭಟನಾಕಾರರು ಅಲ್ಲಿಯೇ ಮೊಕ್ಕಾಂ ಹೂಡಿ, ಅವರ ಮನೆಯ ಆವರಣದಲ್ಲಿಯೇ ಅಡುಗೆ ಮಾಡಿದ್ದಾರೆ.
ಈ ನಡುವೆ ಪ್ರತಿಭಟನಾ ನಿರತ ಯುವಕರು ಪ್ರಧಾನಿಯ ಶಯನಗೃಹದಲ್ಲಿ (ಬೆಡ್ ರೂಂ) WWE ಆಡುತ್ತಾ ಸಖತ್ ಎಂಜಾಯ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ.
PublicNext
11/07/2022 08:31 pm