ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಹಿಂದುಗಳೇ ಅದು ನಿಮ್ಮ ದೇಶ, ಅಸಹಿಷ್ಣುತೆಗೆ ಸಹಿಷ್ಣುತೆಯನ್ನು ನಿಲ್ಲಿಸಿ': ಉದಯಪುರ ಹತ್ಯೆ ಖಂಡಿಸಿದ ಡಚ್ ಸಂಸದ

ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ಇಬ್ಬರು ಪಾತಕಿಗಳು ಟೈಲರ್‌ ಕನ್ಹಯ್ಯಲಾಲ್‌ನನ್ನು ಹಾಡುಹಗಲೇ ಶಿರಚ್ಛೇದ ಮಾಡಿ ಭೀಕರ ಕ್ರೌರ್ಯ ಮೆರೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಚ್ ಸಂಸದ ಗೀರ್ಟ್ ವೈಲ್ಡರ್ ಪ್ರತಿಕ್ರಿಯೆ ನೀಡಿದ್ದು, 'ಭಾರತದಲ್ಲಿ ಹಿಂದುಗಳು ಸೇಫ್ ಆಗಿರಬೇಕು' ಎಂದು ಹೇಳಿದ್ದಾರೆ.

ನೆದರ್ಲೆಂಡ್ಸ್‌ನ ಸಂಸದರಾಗಿರುವ ಗೀರ್ಟ್ ವೈಲ್ಡರ್ ಅವರು ಉದಯಪುರ ಹತ್ಯೆ ಖಂಡಿಸಿ ಟ್ವಿಟ್ ಮಾಡಿದ್ದು, ಭಾರತದ ಸ್ನೇಹಿತನಾಗಿ ನಾನು ನಿಮಗೆ ಹೇಳುತ್ತೇನೆ. ದಯವಿಟ್ಟು ಅಸಹಿಷ್ಣುಗಳಿಗೆ ಸಹಿಷ್ಣುವಾಗಿರುವುದನ್ನು ನಿಲ್ಲಿಸಿ. ಉಗ್ರಗಾಮಿಗಳು, ಭಯೋತ್ಪಾದಕರು ಮತ್ತು ಜಿಹಾದಿಗಳ ವಿರುದ್ಧ ಹಿಂದೂ ಧರ್ಮವನ್ನು ರಕ್ಷಿಸಿ. ಇಸ್ಲಾಂ ಧರ್ಮವನ್ನು ಸಮಾಧಾನಪಡಿಸಬೇಡಿ, ಏಕೆಂದರೆ ಅದು ನಿಮಗೆ ಸಂಕಷ್ಟವನ್ನು ತರುತ್ತದೆ. ಹಿಂದೂಗಳು ತಮ್ಮನ್ನು ಸಂಪೂರ್ಣವಾಗಿ 100% ರಕ್ಷಿಸುವ ನಾಯಕರಿಗೆ ಅರ್ಹರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿರುವ ಗೀರ್ಟ್ ವೈಲ್ಡರ್ ಅವರು, "ಭಾರತದಲ್ಲಿ ಹಿಂದೂಗಳು ಸುರಕ್ಷಿತವಾಗಿರಬೇಕು. ಹಿಂದುಗಳೇ ಅದು ನಿಮ್ಮ ದೇಶ, ನಿಮ್ಮ ತಾಯ್ನಾಡು. ಭಾರತ ಇಸ್ಲಾಮಿಕ್ ರಾಷ್ಟ್ರವಲ್ಲ" ಎಂದು ಹೇಳಿದ್ದಾರೆ.

ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ಕಾರಣಕ್ಕೆ ಬಿಜೆಪಿ ಪಕ್ಷದಿಂದ ಅಮಾನತುಗೊಂಡಿದ್ದ ವಕ್ತಾರೆ ನೂಪುರ್‌ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿಯೂ ಇವರು ಟ್ವೀಟ್‌ ಮಾಡಿದ್ದರು.

ಇದಕ್ಕೂ ಮುನ್ನ ಡಚ್ ಸಂಸದ ಗೀರ್ಟ್ ವೈಲ್ಡರ್ ಅವರು ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರಾದ ನೂಪುರ್ ಶರ್ಮಾ ಅವರಿಗೆ ಬೆಂಬಲ ಸೂಚಿಸಿದ್ದರು. 'ನೂಪುರ್ ಶರ್ಮಾ ಅವರು ಸತ್ಯವನ್ನು ಹೇಳುತ್ತಿದ್ದಾರೆ. ಇಸ್ಲಾಮಿಕ್ ದೇಶಗಳ ಕೋಪವನ್ನು ಹಾಸ್ಯಾಸ್ಪದ ಎಂದು ಕರೆದಿದ್ದರು.

ಗೀರ್ಟ್ ವೈಲ್ಡರ್ಸ್ ನೆದರ್ಲೆಂಡ್ಸ್‌ನ ಬಲಪಂಥೀಯ ನಾಯಕ. ಅವರು ಪಾರ್ಟಿ ಫಾರ್ ಫ್ರೀಡಂನ ಸ್ಥಾಪಕರಾಗಿದ್ದಾರೆ. ಇದು ದೇಶದ ಮೂರನೇ ಅತಿದೊಡ್ಡ ಪಕ್ಷವಾಗಿದೆ ಮತ್ತು 1998ರಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅದರ ನಾಯಕರಾಗಿದ್ದಾರೆ. ವೈಲ್ಡರ್ಸ್ ಇಸ್ಲಾಂನ ಟೀಕೆಗೆ ಹೆಸರುವಾಸಿಯಾಗಿದ್ದಾರೆ.

Edited By : Vijay Kumar
PublicNext

PublicNext

29/06/2022 06:05 pm

Cinque Terre

21.83 K

Cinque Terre

3

ಸಂಬಂಧಿತ ಸುದ್ದಿ