ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉದ್ಘಾಟನೆ ವೇಳೆಯೇ ತುಂಡಾದ ಸೇತುವೆ : ಮೋರಿಗೆ ಬಿದ್ದ ಮೇಯರ್

ಮೆಕ್ಸಿಕೋ : ಕಳಪೆ ಕಾಮಗಾರಿಗಳು ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿಯೂ ನಡೆಯುತ್ತಿವೆ. ಸದ್ಯ ನೂತನವಾಗಿ ನಿರ್ಮಿಸಿದ್ದ ಸೇತುವೆಯೊಂದರ ಉದ್ಘಾಟನೆ ವೇಳೆ ಮುರಿದುಬಿದ್ದ ಘಟನೆ ಮೆಕ್ಸಿಕೋದ ಕುರ್ನಿವಾಕಾದಲ್ಲಿ ನಡೆದಿದೆ.

ಇನ್ನು ಸೇತುವೆ ಉದ್ಘಾಟನೆಗೆ ಆಗಮಿಸಿದ್ದ ಮೇಯರ್ ತನ್ನ ಪತ್ನಿಯ ಸಮೇತ ಮೋರಿಗೆ ಬಿದ್ದಿರುವ ಘಟನೆಯ ವೀಡಿಯೋ ವೈರಲ್ ಆಗಿದೆ.

ಸಾಮರ್ಥ್ಯಕ್ಕಿಂತ ಹೆಚ್ಚಿನ ಜನ ಸೇತುವೆ ಮೇಲೆ ಹತ್ತಿದರಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸೇತುವೆಯ ಉದ್ಘಾಟನೆ ವೇಳೆ ನಗರಪಾಲಿಕೆ ಮೆಯರ್ ಹಾಗೂ ಉಪಮೇಯರ್, ಸದಸ್ಯರು ಸೇರಿದಂತೆ ಅಧಿಕಾರಿಗಳು ಹಾಗೂ ಸ್ಥಳಿಯರು ಹಾಜರಾಗಿದ್ದರು.

ಒಟ್ಟು 24 ಜನ ಕೆಳಕ್ಕೆ ಬಿದ್ದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನೂ ಸೇತುವೆ ಮುರಿದು ಬೀಳುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Edited By : Nirmala Aralikatti
PublicNext

PublicNext

09/06/2022 12:51 pm

Cinque Terre

42.74 K

Cinque Terre

3

ಸಂಬಂಧಿತ ಸುದ್ದಿ