ಇಸ್ಲಾಮಾಬಾದ್: ಮುಂದಿನ 24 ಗಂಟೆಗಳಲ್ಲಿ 10 ಕೆಜಿ ಗೋಧಿ ಹಿಟ್ಟಿನ ಬೆಲೆಯನ್ನು 400 ರೂ.ಗೆ ಇಳಿಸದಿದ್ದರೆ ತಮ್ಮ ಬಟ್ಟೆಗಳನ್ನಾದರೂ ಮಾರಿ ಜನರಿಗೆ ಅಗ್ಗದ ದರದಲ್ಲಿ ಹಿಟ್ಟ ಒದಗಿಸುತ್ತೇನೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಈ ಮೂಲಕ ಖೈಬರ್ ಪಖ್ತುನ್ಕವಾ ಪ್ರಾಂತ್ಯದ ಮುಖ್ಯಮಂತ್ರಿ ಮಹಮೂದ್ ಖಾನ್ ಅವರಿಗೆ ತಿರುಗೇಟು ನೀಡಿದ್ದಾರೆ.
ಥಕಾರ ಕ್ರೀಡಾಂಗಣದಲ್ಲಿ ಭಾನುವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶೆಹಬಾಜ್ ಷರೀಫ್, ಇಮ್ರಾನ್ ಖಾನ್ ದೇಶಕ್ಕೆ ಅತ್ಯಧಿಕ ಹಣದುಬ್ಬರ ಮತ್ತು ನಿರುದ್ಯೋಗವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರ ನೇತೃತ್ವದ ಸರ್ಕಾರವು ಐದು ಮಿಲಿಯನ್ ಮನೆಗಳು ಮತ್ತು 10 ಮಿಲಿಯನ್ ಉದ್ಯೋಗಗಳನ್ನು ಒದಗಿಸುವ ಭರವಸೆಯನ್ನು ನೀಡಿತ್ತು. ಆದರೆ ಅವುಗಳನ್ನು ಈಡೇರಿಸಲು ಸರ್ಕಾರ ವಿಫಲವಾಗಿದ್ದಲ್ಲದೇ, ದೇಶವನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳಿದೆ ಎಂದು ಕಿಡಿಕಾರಿದರು.
PublicNext
30/05/2022 04:26 pm