ಈಗ ಶ್ರೀಲಂಕಾದ ಆರ್ಥಿಕ ಸ್ಥಿತಿ ಪಾತಾಳ ತಲುಪಿದ ಪರಿಣಾಮ ಪೆಟ್ರೋಲ್ ಬೆಲೆ ಲೀಟರ್‌ಗೆ 250 ರೂ. ಗಡಿ ದಾಟಿದೆ. ಹೋಟೆಲ್ ಬಿಲ್ ರೇಟ್ ದುಬಾರಿಯಾಗಿ, ಒಂದು ಟೀ-ಕಾಫಿ ಬೆಲೆ ನೂರು ರೂ. ಸಮೀಪಿಸಿದೆ.
2022ರ ಎಪ್ರಿಲ್ 17ರಂದು ಕೊಲಂಬೊದ ನ್ಯೂ ಸರಸ್ವತಿ ಕೆಫೆಯ ಬಿಲ್ ಈ ಕೆಳಗಿನಂತಿದೆ.
1) ಒಂದು ಇಡ್ಲಿ- ಬೆಲೆ- 90 ರೂ.
2) ಒಂದು ಉದ್ದಿನ ವಡೆ-- 90 ರೂ.
3) ಒಂದು ಟೀ/ ಕಾಫಿ- 80 ರೂ. ಇದು ಹೋಟೆಲ್ ಇಡ್ಲಿ, ವಡೆ ಟಿ ಕಥೆ. ಇನ್ನು ಶ್ರೀಲಂಕಾದಾದ್ಯಂತ ಪೆಟ್ರೋಲ್ ಹಾಹಾಕಾರ ಶುರುವಾಗಿದೆ. ಒಂದು ಲೀಟರ್ ಪೆಟ್ರೋಲ್ 250, 300 ರೂ. ದಾಟಿದೆ. ಒಬ್ಬರಿಗೆ, ಒಂದು ಬೈಕ್ ಆಟೋಗೆ 2 ಲೀಟರ್ ಮಾತ್ರ ಪೆಟ್ರೋಲ್ ಬಂಕ್‌ನಲ್ಲಿ ಹಾಕಲಾಗುತ್ತಿದೆ.
ಭಾರತ ಮೂಲದ ಮಲಯಾಳಿ ಸಹೋದರ ಎಪ್ರಿಲ್ 15ರಂದು ಶ್ರೀಲಂಕಾದಲ್ಲಿ ಶೂಟ್ ಮಾಡಿ ಕಳುಹಿಸಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆತನಮಾತಲ್ಲೆ ಕೇಳುವುದಾದರೆ..
ಶ್ರೀಲಂಕಾದಲ್ಲಿ ಸ್ಥಿರವಾದ, ಭದ್ರ ಮತ್ತು ಸುಭದ್ರವಾದ ಸರ್ಕಾರ ಬಂದು ಜನರ ಜೀವನೋಪಾಯ ಸುಧಾರಿಸಲಿ ಎಂಬುದೇ Public Next ಆಶಯಾ ಕೂಡ.
ಸುರೇಶ್ ಬಾಬು Public Next ಬೆಂಗಳೂರು.
PublicNext
20/04/2022 10:53 pm