ಉಕ್ರೇನ್: ರಷ್ಯಾ ದೇಶದ ಟೈಮ್ ಚೆನ್ನಾಗಿಲ್ಲ ಬಿಡಿ. ವಿಷ ಹಾಕಿ ಕೊಲ್ತಾರೆ ಅಂತ ಪುಟಿನ್ ಭಯದಲ್ಲಿದ್ದಾರೆ. ಇದೇ ಪುಟಿನ್ ಆದೇಶದ ಮೇರೆಗೆ ಉಕ್ರೇನ್ ಮೇಲೆ ದಾಳಿ ನಡೆಸಿರೋ ಸೈನಿಕರು ಒಬ್ಬರಾದ ಮೇಲೆ ಒಬ್ಬರು ಅನ್ನೋ ಹಾಗೆ ಸಾವಿರಾರು ಜನ ಸಾಯುತ್ತಿದ್ದಾರೆ.
ನಿಜ, ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿ ಇಡೀ ಜಗತ್ತಿನ ಕೆಂಗಣ್ಣಿಗೆ ಗುರಿ ಆಗಿದೆ. ಉಕ್ರೇನ್ ದಾಳಿಯಲ್ಲಿ ಇಡೀ ಉಕ್ರೇನ್ ಬಹುತೇಕ ಸರ್ವನಾಶ ಆಗಿದೆ. ಇದರ ಬೆನ್ನಲ್ಲಿಯೇ ರಷ್ಯಾ ಸೈನಿಕರೂ ಬಲಿಯಾಗಿದ್ದಾರೆ.
ಹೌದು. ಒಂದು ತಿಂಗಳ ಒಟ್ಟು ಯುದ್ಧದಲ್ಲಿ ಬರೋಬ್ಬರಿ 15,600 ರಷ್ಯಾ ಸೈನಿಕರು ಸತ್ತು ಹೋಗಿದ್ದಾರೆ. ಇದರಿಂದ ರಷ್ಯಾ ದೇಶಕ್ಕೆ ಭಾರಿ ನಷ್ಟವಾಗಿದೆ.
ಇಷ್ಟೇ ಅಲ್ಲ, 517 ಯುದ್ಧ ಟ್ಯಾಂಕರ್‌ಗಳು,1,578 ಶಸ್ತ್ರ ಸಜ್ಜಿತ ವಾಹನಗಳು,80 ಮಿಸೈಲ್ ಲಾಂಚರ್‌ಗಳು,269 ಫಿರಂಗಿಗಳು ಹೀಗೆ ಸಾಲು ಸಾಲು ನಷ್ಟವನ್ನ ಅನುಭಿಸಿದೆ ಪುಟಿನ್ ರಷ್ಯಾ ದೇಶ. ಯುದ್ಧ ಬೇಕಿತ್ತಾ ಪುಟಿನ್ ಸಾಹೇಬ್ರೇ ಅಂತಲೇ ಕೇಳುವಂತೆ ಮಾಡಿದೆ.
PublicNext
24/03/2022 11:19 am