ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು; ಭಾರತದ ಕಡೆ ಜನರ ಪಯಣ

ತಮಿಳುನಾಡು: ಶ್ರೀಲಂಕಾದ ಪರಿಸ್ಥಿತಿ ಹದಗೆಟ್ಟಿದೆ. ಜನರ ಜೀವನ ಅಸ್ತವ್ಯಸ್ಥಗೊಂಡಿದೆ. ಇಲ್ಲಿರೋ ಜನರಿಗೆ ತಿನ್ನಲು ಆಹಾರ ವಿಲ್ಲ. ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಬಂಕ್‌ಗಳಲ್ಲಿ ತೈಲವೂ ಇಲ್ಲ. ಇದರಿಂದ ಇಲ್ಲಿಯ ಜನ ಭಾರತಕ್ಕೆ ವಲಸೆ ಬರುತ್ತಿದ್ದಾರೆ.

ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಇದರಿಂದ ಇಲ್ಲಿಯ ಜನ ಭಾರತದ ಕಡೆಗೆ ಬರ್ತಾಯಿದ್ದಾರೆ. ಕರಾವಳಿ ಪಡೆ ಮೂವರು ಮಕ್ಕಳು ಸೇರಿದಂತೆ ಆರು ಜನರನ್ನ ವಶಪಡಿಸಿಕೊಂಡಿದೆ.

ಶ್ರೀಲಂಕಾದ ಉತ್ತರ ಭಾಗದ ಜಪ್ನಾ ಮತ್ತು ಕೊಕುಪಡೈಯನ್ ನಿವಾಸಿಗಳಾದ ಇವರನ್ನ ಈಗ ತಮಿಳುನಾಡಿನ ರಾಮೇಶ್ವರಂ ನಲ್ಲಿ ಸದ್ಯ ರಕ್ಷಿಸಲಾಗಿದೆ. ಶ್ರೀಲಂಕಾದ ಪರಿಸ್ಥಿತಿ ದಿನೇ ದಿನೇ ಗಂಭೀರ ಆಗುತ್ತಿದೆ. ಹಾಗಾಗಿಯೇ ಭಾರತದ ಕಡೆಗೆ ವಲಸೆ ಬರೋರ ಸಂಖ್ಯೆ ಹೆಚ್ಚಾಗೋ ಚಾನ್ಸ್ ಜಾಸ್ತಿ ಇದೆ.

Edited By :
PublicNext

PublicNext

23/03/2022 05:05 pm

Cinque Terre

21.34 K

Cinque Terre

3

ಸಂಬಂಧಿತ ಸುದ್ದಿ