ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಮ್ರಾನ್‌ ಖಾನ್‌ಗೆ ಶಾಕ್ ಕೊಟ್ಟ ಸೇನಾ ಮುಖ್ಯಸ್ಥ ಬಜ್ವಾ

ಇಸ್ಲಾಮಾಬಾದ್: ಉಕ್ರೇನ್ ನೆರೆರಾಷ್ಟ್ರ ರಷ್ಯಾದ ದಾಳಿಯಿಂದ ತತ್ತರಿಸಿದ್ದರೆ ಪಾಕಿಸ್ತಾನ ಆಂತರಿಕ ರಾಜಕೀಯ ಸಂಘರ್ಷದಿಂದ ತತ್ತರಿಸಿದೆ. ಪಾಕ್ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದು, ಇಮ್ರಾನ್ ಖಾನ್ ಸರ್ಕಾರ ಪತನಗೊಳ್ಳುವುದು ಖಚಿತ ಎನ್ನಲಾಗುತ್ತಿದೆ.

ಏತನ್ಮಧ್ಯೆ, ನಿಮ್ಮ ಸಮಯ ಮುಗೀತು? ರಾಜೀನಾಮೆ ಕೊಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಸೇನಾ ಮುಖ್ಯಸ್ಥ ಖಾಮರ್ ಜಾವೇದ್ ಬಜ್ವಾ ಸೂಚನೆ ನೀಡಿದ್ದಾರಂತೆ.

ಸೇನಾ ಮುಖ್ಯಸ್ಥ ಜನರಲ್ ಖಾಮರ್ ಜಾವೇದ್ ಬಜ್ವಾ ನೇತೃತ್ವದ ಪಾಕಿಸ್ತಾನ ಸೇನೆಯ ಉನ್ನತ ಅಧಿಕಾರಿಗಳು ಎರಡು ದಿನಗಳ ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಸಭೆಯ ಅಂತ್ಯದ ನಂತರ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್(ISI) ಮುಖ್ಯಸ್ಥ ನದೀಮ್ ಅಂಜುಮ್ ಅವರು ಇಮ್ರಾನ್ ಖಾನ್ ಅವರನ್ನು ಭೇಟಿಯಾದ ನಂತರ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

Edited By : Vijay Kumar
PublicNext

PublicNext

22/03/2022 08:26 pm

Cinque Terre

50.62 K

Cinque Terre

4

ಸಂಬಂಧಿತ ಸುದ್ದಿ