ರಷ್ಯಾ-ಉಕ್ರೇನ್ ಸಂಘರ್ಷದ ನಡುವೆ ಸೂಪರ್ ಮಾರ್ಕೆಟ್‌ನಲ್ಲಿ ಸಕ್ಕರೆಗಾಗಿ ರಷ್ಯನ್ನರು ಪರಸ್ಪರ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೂಪರ್ ಮಾರ್ಕೆಟ್‌ನಲ್ಲಿ ಒಬ್ಬ ಸಿಬ್ಬಂದಿ ಸಕ್ಕರೆ ಚೀಲಗಳನ್ನು ಇಟ್ಟಿದ್ದ ಟ್ರಾಲಿಯನ್ನು ತಳ್ಳುತ್ತಾರೆ. ಈ ವೇಳೆ ಸಕ್ಕರೆಗಾಗಿ ಕಾಯುತ್ತಾ ನಿಂತಿದ್ದ ಜನರು ಟ್ರಾಲಿ ಬರುತ್ತಿದ್ದಂತೆ ಸಕ್ಕರೆ ಪಡೆಯಲು ಪರಸ್ಪರ ಹೊಡೆದಾಡುತ್ತಾರೆ. ಕಳೆದ ವಾರದ ಅಂತ್ಯದಿಂದ, ರಷ್ಯಾದಲ್ಲಿ ಸಕ್ಕರೆ ಬೆಲೆ ಶೇ. 12.8 ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.
PublicNext
22/03/2022 07:27 pm