ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿ ಕಾಶ್ಮೀರ್ ಫೈಲ್ಸ್ ಸೆನ್ಸಾರ್ ಮಾಡ್ಬೇಡಿ-ನ್ಯೂಜಿಲೆಂಡ್ ಮಾಜಿ ಉ.ಪ್ರಧಾನಿ

ನ್ಯೂಜಿಲೆಂಡ್: ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನ ಸೆನ್ಸಾರ್ ಮಾಡಿಯೇ ನಮ್ಮ ದೇಶದಲ್ಲಿ ಪ್ರದರ್ಶನ ಮಾಡಿದರೆ, ಅದು ನಮ್ಮ ದೇಶದ ಜನರ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಿದಂತೆ ಎಂದು ನ್ಯೂಜಿಲೆಂಡ್ ಮಾಜಿ ಉಪ ಪ್ರಧಾನಿ ವಿನ್‌ಸ್ಟನ್ ಪೀಟರ್ಸ್ ಹೇಳಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಚಿತ್ರ ನ್ಯೂಜಿಲೆಂಡ್‌ ನಲ್ಲೂ ಪ್ರದರ್ಶನ ಕಾಣಬೇಕು ಎಂದು ವಿನ್‌ಸ್ಟನ್ ಪೀಟರ್ಸ್ ಕೋರಿದ್ದರು. ಅದರಂತೆ ಈಗ ಇಲ್ಲಿ ಈ ಚಿತ್ರದ ಪ್ರದರ್ಶನಕ್ಕೆ ಪ್ಲಾನ್ ಆಗಿದೆ. ಆದರೆ ಅದಕ್ಕೂ ಮೊದಲು ಈ ಚಿತ್ರ ಸೆನ್ಸಾರ್ ಆಗಬೇಕು ಅನ್ನೋದೇ ಸದ್ಯದ ಮಾತು.

ಇದ್ನ ವಿರೋಧಿಸಿಯೇ ಮಾಜಿ ಉಪ ಪ್ರದಾನಿ ವಿನ್‌ಸ್ಟನ್ ಪೀಟರ್ಸ್, ದಿ ಕಾಶ್ಮೀರ್ ಫೈಲ್ಸ್ ಚಿತ್ರ ಸತ್ಯ ಘಟನೆಯನ್ನೆ ಆಧರಿಸಿದೆ. ಸತ್ಯವನ್ನೇ ಈ ಚಿತ್ರ ತೋರುತ್ತಿದೆ. ಇಂತಹ ಚಿತ್ರವನ್ನ ಸೆನ್ಸಾರ್ ಮಾಡದೇ ಪ್ರದರ್ಶನ ಮಾಡಬೇಕು ಅಂತಲೇ ಪೀಟರ್ಸ್‌ ಒತ್ತಾಯಿಸಿದ್ದಾರೆ.

Edited By :
PublicNext

PublicNext

21/03/2022 03:39 pm

Cinque Terre

26.94 K

Cinque Terre

2

ಸಂಬಂಧಿತ ಸುದ್ದಿ