ಹಾವೇರಿ: ಉಕ್ರೇನ್‌ನಲ್ಲಿ ರಷ್ಯಾ ಸೇನೆಯ ದಾಳಿಗೆ ಬಲಿಯಾದ ಕನ್ನಡಿಗ ವೈದ್ಯಕೀಯ ವಿದ್ಯಾರ್ಥಿ ನವೀನ್ ಶವ ಕಂಡ ತಾಯಿ ಕೈ ಮುಗಿದು ಕಣ್ಣೀರಿಟ್ಟಿದ್ದಾರೆ.
ಇಂದು ಸೋಮವಾರ ಮುಂಜಾನೆ ನವೀನ್ ಪಾರ್ಥಿವ ಶರೀರ ಸ್ವಗ್ರಾಮ ರಾಣೆಬೆನ್ನೂರು ತಾಲೂಕಿನ ಚಳಗೇರಿಗೆ ಆಗಮಿಸಿದೆ. ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಈ ವೇಳೆ ಪುತ್ರನ ಶವ ಕಂಡು ತಾಯಿ ವಿಜಯಲಕ್ಷ್ಮಿ ಕೈ ಮುಗಿದು ಕಣ್ಣೀರಿಟ್ಟಿದ್ದಾರೆ. ಸದ್ಯ ಇಡೀ ಗ್ರಾಮದ ಜನತೆ ಶೋಕ ಸಾಗರದಲ್ಲಿ ಮುಳುಗಿದೆ.
PublicNext
21/03/2022 11:04 am