ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂವರು ಭಾರತೀಯರನ್ನ ರಕ್ಷಿಸಿದ ರಷ್ಯಾ ಸೈನಿಕರು !

ಉಕ್ರೇನ್: ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಲೇ ಇದೆ. ಇಲ್ಲಿಯ ಪ್ರಮುಖ ನಗರಗಳ ಮೇಲೆ ದಾಳಿ ಮುಂದುವರೆಸಿದೆ. ಈ ನಡುವೇನೆ ರಷ್ಯಾ ಸೈನಿಕರು ಮೂವರು ಭಾರತೀಯರನ್ನ ಉಕ್ರೇನ್ ನಿಂದ ಮಾಸ್ಕೋದಲ್ಲಿರೋ ಭಾರತೀಯ ರಾಯಭಾರಿ ಕಚೇರಿಗೆ ಸ್ಥಳಾಂತರಿಸಿದ್ದಾರೆ.

ಇಲ್ಲಿವರೆಗೂ ಗಂಗಾ ಯೋಜನೆ ಅಡಿಯಲ್ಲಿಯೇ ಭಾರತ ಸರ್ಕಾರ ಭಾರತೀಯ ವಿದ್ಯಾರ್ಥಿಗಳನ್ನ ಭಾರತಕ್ಕೆ ತಂದು ಬಿಟ್ಟಿದೆ. ಆದರೆ ಇದೇ ಮೊದಲ ಬಾರಿಗೆ ರಷ್ಯಾ ದೇಶ ಭಾರತೀಯ ಮೂವರು ವಿದ್ಯಾರ್ಥಿಗಳನ್ನ ಸುರಕ್ಷಿತ ಸ್ಥಳಕ್ಕೆ ಬಿಡಲು ನೆರವಾಗಿದೆ.

ರಷ್ಯಾ ಸೇನೆಯ ನೆರವಿನಿಂದ ಉಕ್ರೇನ್‌ನಿಂದ ಸುರಕ್ಷಿತ ಸ್ಥಳಕ್ಕೆ ಬಂದ ಮೂವರಲ್ಲಿ ಒಬ್ಬ ವಿದ್ಯಾರ್ಥಿ ಆಗಿದ್ದಾನೆ. ಇನ್ನಿಬ್ಬರು ಉದ್ಯಮಿಗಳಾಗಿದ್ದಾರೆ.

Edited By :
PublicNext

PublicNext

16/03/2022 04:33 pm

Cinque Terre

42.79 K

Cinque Terre

0

ಸಂಬಂಧಿತ ಸುದ್ದಿ