ಕೀವ್: ನ್ಯಾಟೋ ಸದಸ್ಯತ್ವಕ್ಕೆ ನಾವು ಪಟ್ಟು ಹಿಡಿಯೋದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ ಝಲೆನ್ಸ್ಕಿ ಹೇಳಿಕೊಂಡಿದ್ದಾರೆ.
ಉಕ್ರೇನ್ ದೇಶಕ್ಕೆ ರಷ್ಯಾ ವಿಧಿಸಿದ್ದ ನಾಲ್ಕು ಷರತ್ತುಗಳಲ್ಲಿ ಎರಡನ್ನ ಉಕ್ರೇನ್ ಒಪ್ಪಿಕೊಂಡಿದೆ. ಇದರಿಂದ ಯುದ್ಧ ಕೊನೆಗೊಳ್ಳುವುದೇ ಅನ್ನೋ ಪ್ರಶ್ನೆ ಕೂಡ ಇದೆ.
ನಮ್ಮನ್ನ ನ್ಯಾಟೋ ಒಪ್ಪಿಕೊಳ್ಳಲು ಸಿದ್ಧ ವಿಲ್ಲ. ರಷ್ಯಾ ವಿರುದ್ಧ ಯುದ್ಧ ಮಾಡಿ ಅಪಾಯ ತಂದುಕೊಳ್ಳುವ ಯೋಚನೆ ನ್ಯಾಟೋಗೂ ಇಲ್ಲ. ರಷ್ಯಾ ವಿರುದ್ಧ ಯುದ್ಧ ಮಾಡಲು ನ್ಯಾಟೋ ಹೆದರುತ್ತದೆ. ಈ ಕಾರಣಕ್ಕೆ ನಾವು ನ್ಯಾಟೋ ಬಗೆಗಿನ ನಮ್ಮ ನಿಲುವಿನಿಂದ ಹಿಂದಕ್ಕೆ ಸರಿದಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ ಝಲೆನ್ಸ್ಕಿ ವಿವರಿಸಿದ್ದಾರೆ.
.
PublicNext
09/03/2022 08:29 am