ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್ ಮೇಲೆ ದಾಳಿ ನಡೆಸಿ ಕೆಟ್ಟ ದಾಖಲೆಗೆ ಗುರಿಯಾದ ರಷ್ಯಾ.!

ಮಾಸ್ಕೋ: ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ವಿರುದ್ಧ ಜಗತ್ತಿನ ಅನೇಕ ದೇಶಗಳು ಅಸಮಾಧಾನ ಹೊರ ಹಾಕಿವೆ. ಅಷ್ಟೇ ಅಲ್ಲದೆ ನೆಟ್‌ಫ್ಲಿಕ್ಸ್‌, ಮೈಕ್ರೊಸಾಫ್ಟ್‌, ವೀಸಾ ಮತ್ತು ಮಾಸ್ಟರ್‌ಕಾರ್ಡ್ ನಂತಹ ದೈತ್ಯ ಕಂಪನಿಗಳು ರಷ್ಯಾದ ಮೇಲೆ ನಿರ್ಬಂಧ ಹೇರಿವೆ. ಈ ಮೂಲಕ ನಿರ್ಬಂಧಗಳ ಸುಳಿಗೆ ಸಿಲುಕಿರುವ ರಷ್ಯಾ ಇರಾನ್‌ ದೇಶವನ್ನು ಹಿಂದಿಕ್ಕಿ ಕೆಟ್ಟ ದಾಖಲೆಗೆ ಗುರಿಯಾಗಿದೆ.

ಹೌದು. ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ರಷ್ಯಾ ದೇಶವು ಇರಾನ್‌ಅನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ನಿರ್ಬಂಧಗಳಿಗೆ ಗುರಿಯಾದ ದೇಶವಾಗಿದೆ ಹೊರ ಹೊಮ್ಮಿದೆ. ಫೆಬ್ರವರಿ 22ರಿಂದ ಜಾಗತಿಕ ಡೇಟಾಬೇಸ್ ಸಂಸ್ಥೆ ಕ್ಯಾಸ್ಟೆಲ್ಲಮ್.ಎಐ ಪ್ರಕಾರ, ಯುಎಸ್ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳ ನೇತೃತ್ವದಲ್ಲಿ ರಷ್ಯಾವು 2,778 ಹೊಸ ನಿರ್ಬಂಧಗಳಿಗೆ ಗುರಿಯಾಗಿದೆ. ಅದರ ಒಟ್ಟು ಸಂಖ್ಯೆಯು 5,532ಕ್ಕೆ ತಲುಪಿದೆ. ಇರಾನ್ ಒಂದು ದಶಕದ ಅವಧಿಯಲ್ಲಿ ತನ್ನ ವಿರುದ್ಧ 3,616 ನಿರ್ಬಂಧಗಳನ್ನು ಎದುರಿಸಿದೆ.

Edited By : Vijay Kumar
PublicNext

PublicNext

08/03/2022 11:46 am

Cinque Terre

46.84 K

Cinque Terre

3

ಸಂಬಂಧಿತ ಸುದ್ದಿ