ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು ಮುಂದುವರೆದಿದ್ದು, ರಷ್ಯಾ ಉಕ್ರೇನ್ ಮೇಲೆ ತನ್ನ ಕಾಳಗ ನಡೆಸುತ್ತಲೇ ಇದೆ. ಇಂತಹ ಯುದ್ಧ ಭೂಮಿಯಲ್ಲೇ ಉಕ್ರೇನ್‌ನ ಯೋಧರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೌದು. ಉಕ್ರೇನ್‌ನ ಮೇಲೆ ರಷ್ಯಾ ನಡೆಸಿರುವ ಯುದ್ಧವು 11ನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಇದರ ಮಧ್ಯೆ ಬ್ರಿಗೇಡ್–112ರ ಲೇಸ್ಯಾ ಮತ್ತು ವ್ಯಾಲೆರಿ ನಡುವೆ ವಿವಾಹ ನಡೆದಿದೆ. ಈ ದೃಶ್ಯದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಲೇಸ್ಯಾ ಮತ್ತು ವ್ಯಾಲೆರಿ ಇವರಿಬ್ಬರೂ ಉಕ್ರೇನ್ ಕೀವ್ನ ಫ್ರಂಟ್ಲೈನ್ನಲ್ಲಿ ನಿಂತು ರಷ್ಯಾದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಹೊಸ ಜೋಡಿಗೆ ಉಕ್ರೇನ್ನಲ್ಲಿ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.
PublicNext
07/03/2022 05:04 pm