ಉಕ್ರೇನ್: ರಷ್ಯಾ ದೇಶ ಉಕ್ರೇನ್ ಮೇಲೆ ದಾಳಿ ಮಾಡಿದ್ದರಿಂದ ಕೇವಲ ಮನುಷ್ಯರಿಗೆ ಎಫೆಕ್ಟ್ ಆಗಿಲ್ಲ. ಪ್ರಾಣಿಗಳಿಗೂ ಭಾರಿ ತೊಂದರೆ ಆಗಿದೆ. ಪ್ರಾಣಿ ಸಂಗ್ರಹಾಲಯದಲ್ಲಿ ಆರಾಮಾಗಿದ್ದ ಪ್ರಾಣಿಗಳು ಯುದ್ಧದಿಂದ ಬಸವಳಿದಿವೆ. ಆದ್ದರಿಂದಲೇ ಈಗ ಈ ಪ್ರಾಣಿಗಳನ್ನ ಟ್ರಕ್ ಮೂಲಕ ಫೋಲ್ಯಾಂಡ್‌ಗೆ ಕಳಿಸಲಾಗಿದೆ.
ಕೀವ್ ನಗರದ ಪೂರ್ವದಲ್ಲಿಯೇ ಇದೆ ಈ ಅಭಯಾರಣ್ಯದ ಪ್ರಾಣಿಗಳನ್ನ ಈಗ ಸ್ಥಳಾಂತರಿಸಲಾಗಿದೆ. ಇಲ್ಲಿದ್ದ ಆರು ಸಿಂಹಗಳು, ಆರು ಹುಲಿಗಳು,ಒಂದು ಆಫ್ರಿಕನ್ ಕಾಡು ನಾಯಿ,ಎರಡು ಕ್ಯಾರಕಲ್ಸ್ (ಕಾಡು ಬೆಕ್ಕು)ಗಳನ್ನ ಟ್ರಕ್ ಮೂಲಕ ಪೋಲ್ಯಾಂಡ್ ಗೆ ಬಿಡಲಾಗಿದೆ.
ಕೀವ್ ನಿಂದ ಟ್ರಕ್ ಮೂಲಕ ಪೋಲ್ಯಾಂಡ್ ಪ್ರಾಣಿಗಳನ್ನ ಹೊತ್ತುಕೊಂಡು ಹೋಗಿಕೆ ಬರೋಬ್ಬರಿ ಎರಡು ದಿನ ಬೇಕಾಗಿದೆ ಅಂತಲೇ ಪ್ರಾಣಿ ಸಂಗ್ರಹಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
PublicNext
06/03/2022 11:05 am