ವಾಯವ್ಯ ಪಾಕಿಸ್ತಾನದಲ್ಲಿ ಇಂದು (ಶುಕ್ರವಾರ) ಮಸೀದಿವೊಂದರಲ್ಲಿ ಬಾಂಬ್ ಸ್ಫೋಟಗೊಂಡಿದ್ದು 30 ಮಂದಿ ಸಾವನ್ನಪ್ಪಿದ್ದು 50 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಪೇಶಾವರದ ಕ್ವಿಸ್ಸಾ ಖ್ವಾನಿ ಬಜಾರ್ ಪ್ರದೇಶದ ಜಾಮಿಯಾ ಮಸೀದಿಯಲ್ಲಿ ಭಕ್ತರು ಪ್ರಾರ್ಥನೆಗೆಂದು ಸೇರಿದ್ದ ವೇಳೆ ಸ್ಫೋಟ ಸಂಭವಿಸಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಮಸೀದಿಗೆ ಕಾವಲು ನಿಂತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಇಬ್ಬರು ದಾಳಿಕೋರರು ಮಸೀದಿಗೆ ಪ್ರವೇಶಿಸಿದ್ದಾರೆ ಎಂದು ರಾಜಧಾನಿ ನಗರ ಪೊಲೀಸ್ ಅಧಿಕಾರಿ ಪೇಶಾವರ್ ಇಜಾಜ್ ಅಹ್ಸಾನ್ ಹೇಳಿದ್ದಾರೆ. ಈ ವೇಳೆ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಗುಂಡಿನ ದಾಳಿಯ ನಂತರ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಸದ್ಯ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು ಸ್ಫೋಟಕ್ಕೆ ಕಾರಣವೇನು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ.
PublicNext
04/03/2022 03:27 pm