ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೀವ್:ಗುಂಡು ಬಿದ್ದರೂ ಬದುಕುಳಿದ ಭಾರತೀಯ ಸ್ಟೂಡೆಂಟ್ !

ಕೀವ್: ಉಕ್ರೇನ್‌ನ ಕೀವ್ ಪ್ರದೇಶದಲ್ಲಿ ರಷ್ಯಾ ಸೈನಿಕರ ಗುಂಡಿನ ದಾಳಿಗೆ ಗಾಯಗೊಂಡ ಭಾರತದ ವಿದ್ಯಾರ್ಥಿ ಈಗ ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡೇ ತನಗಾದ ಅನುಭವ ಹಂಚಿಕೊಂಡಿದ್ದಾನೆ.

ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್ ಉಕ್ರೇನ್‌ನ ಕೀವ್ ನಗರದಿಂದ ಪಲಾಯನಗೊಳ್ಳಲು ಪ್ರಯತ್ನದಲ್ಲಿಯೇ ಭುಜಕ್ಕೆ ಗುಂಡು ಬಿದ್ದಿದೆ. ಕಾಲಿನ ಮೂಳೆ ಕೂಡ ಮುರಿದು ಹೋಗಿದೆ.

ಈ ನೋವಿನಲ್ಲಿಯೇ ಇರೋ ಹರ್ಜೋತ್ ಸಿಂಗ್ ಕೀವ್‌ ನಗರದ ಆಸ್ಪತ್ರೆಯಿಂದಲೇ ತಮಗಾದ ನೋವಿನ ಕತೆ ಹೇಳಿಕೊಂಡಿದ್ದಾರೆ. ಹೌದು. 'ನನ್ನ ಭುಜಕ್ಕೆ ಗುಂಡು ಬಿದ್ದಿದೆ. ಈಗ ಗುಂಡನ್ನ ಹೊರಗೆ ತೆಗೆಯಲಾಗಿದೆ. ಕಾಲಿನ ಮೂಳೆ ಮುರಿದಿದೆ.

ಆದರೆ ನಾನು ಸಂಬಂಧಪಟ್ಟವರಿಗೆ ಕರೆ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಯಾರೊಬ್ಬರೂ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ.ಆದರೆ ಈ ಖಾಸಗಿ ವಾಹಿನಿಯೊಂದು ನನ್ನ ಅಳಲು ಕೇಳಿದೆ. ಆ ಮೂಲಕ ಜಗತ್ತು ನನ್ನ ನೋಡುತ್ತಿದೆ ಅಂತಲೇ ಹೇಳಿಕೊಂಡಿದ್ದಾರೆ ಹರ್ಜೋತ್ ಸಿಂಗ್.

Edited By :
PublicNext

PublicNext

04/03/2022 01:52 pm

Cinque Terre

60.71 K

Cinque Terre

4

ಸಂಬಂಧಿತ ಸುದ್ದಿ