ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರ ಹೆಲ್ಪ್ ಮಾಡ್ತಿಲ್ಲ, ಮಾಧ್ಯಮಗಳನ್ನು ನಂಬಬೇಡಿ

ಉಕ್ರೇನ್ ನಲ್ಲಿ ರಷ್ಯಾ ದಾಳಿ ಮುಂದುವರೆದಿದೆ.ಈ ಮಧ್ಯೆ ಭಾರತದ ವಿದ್ಯಾರ್ಥಿಗಳನ್ನು ಕರೆತರುವ ಕೆಲಸ ಸರ್ಕಾರ ದಿಂದ ಮುಂದುವರೆದಿದೆ. ಆಪರೇಶನ್ ಗಂಗಾ ಹೆಸರಲ್ಲಿ ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿದೆ.

ಈ ಮಧ್ಯೆ ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳು ನಮಗೆ ಭಾರತ ಸರ್ಕಾರ ಸಹಾಯ ಮಾಡುತ್ತಿಲ್ಲ, ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನಂಬಬೇಡಿ ಎಂದು ಆಕ್ರೋಶ ಹೊರಹಾಕಿದ್ದಾರೆ..

ವಿದ್ಯಾರ್ಥಿನಿಯೊಬ್ಬಳು ಇಂಡಿಯನ್ ಎಂಬಸ್ಸಿಯ ವಿಕ್ರಮ್ ಕುಮಾರ್ ಎಂಬುವವರಿಗೆ ಕರೆ ಮಾಡಿ ಸಹಾಯ ಕೇಳಲು ಸತತವಾಗಿ ಪ್ರಯತ್ನಿಸಿದ್ದಾಳೆ, ಆಗ ಎಂಬಸ್ಸಿಯ ಅಧಿಕಾರಿ ಆಕೆಯ ಕರೆಯನ್ನು ರಿಜೆಕ್ಟ್ ಮಾಡಿದ್ದಾರೆ. ಸತತ ಪ್ರಯತ್ನ ಬಳಿಕ ಬೇಸತ್ತ ವಿದ್ಯಾರ್ಥಿನಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ನಾವು ಇರೋ ಪ್ರದೇಶದಿಂದ ಉಕ್ರೇನ್ ಗಡಿಯು 800KM ದೂರವಿದೆ, ನಾವು ಅಲ್ಲಿಗೆ ತಲುಪುವುದು ಹೇಗೆ? ನಮ್ಮ ಸಹಾಯಕ್ಕೆ ಯಾರೂ ಬರುತ್ತಿಲ್ಲ ಎಂದು ಅಳಲುತೋಡಿಕೊಂಡಿದ್ದಾಳೆ..

Edited By : Manjunath H D
PublicNext

PublicNext

03/03/2022 01:00 pm

Cinque Terre

80.83 K

Cinque Terre

44

ಸಂಬಂಧಿತ ಸುದ್ದಿ