ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾದಿಂದ ಫಿರಂಗಿ ದಾಳಿ: 70ಕ್ಕೂ ಅಧಿಕ ಉಕ್ರೇನ್ ಸೈನಿಕರು, 136 ನಾಗರಿಕರ ಸಾವು

ಕೀವ್: ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿ ಆರನೇ ದಿನವಾಗಿದೆ. ಈ ಮಿಲಿಟರಿ ದಾಳಿಯಲ್ಲಿ 13 ಮಕ್ಕಳು ಸೇರಿದಂತೆ ಕನಿಷ್ಠ 136 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 400 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ (ಒಎಚ್‌ಸಿಎಚ್‌ಆರ್) ಮಂಗಳವಾರ ತಿಳಿಸಿದೆ.

ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಕಾರ್ಕಿವ್‌ನಲ್ಲಿ ಮಂಗಳವಾರ ರಷ್ಯಾ ಪಡೆ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಶೆಲ್ಲಿಂಗ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ರಷ್ಯಾ ಇತ್ತೀಚಿಗೆ ಕಾರ್ಕಿವ್ ಮತ್ತು ಕೀವ್ ಮಧ್ಯದಲ್ಲಿರುವ ಓಖ್ಟಿರ್ಕಾ ವಾಯುನೆಲೆಯಲ್ಲಿ ನಡೆಸಿದ ಫಿರಂಗಿ ದಾಳಿಯಲ್ಲಿ 70ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

Edited By : Vijay Kumar
PublicNext

PublicNext

01/03/2022 10:48 pm

Cinque Terre

61.62 K

Cinque Terre

0

ಸಂಬಂಧಿತ ಸುದ್ದಿ