ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ನಿಜಕ್ಕೂ ಭಾರೀ ಪ್ಲಾನ್ ಮಾಡಿದೆ. ಇದು ಈಗ ಹೊರ ಬೀಳುತ್ತಿದೆ. ಉಕ್ರೇನ್‌ನ ಪ್ರಮುಖ ನಗರದ ಮನೆಗಳ ಮೇಲೆ ಎಕ್ಸ್ ಮಾರ್ಕ್ ಗಳು ಕಂಡು ಬಂದಿದ್ದು ಇದು ರಷ್ಯಾ ದೇಶದ ಯುದ್ಧದ ಪ್ಲಾನಿಂಗ್ ಅನ್ನೋದನ್ನ ಸಾರಿ ಸಾರಿ ಹೇಳುತ್ತಿವೆ.
ಹೌದು! ರಷ್ಯಾ ದೇಶ ಇಡೀ ಉಕ್ರೇನ್ ದೇಶವನ್ನೇ ಸರ್ವನಾಶ ಮಾಡೋಕೆ ಹೊರಟು ಬಿಟ್ಟಿದೆ. ಇಲ್ಲಿಯ ಮನೆಗಳ ಮೇಲೆ ಎಕ್ಸ್ ಮಾರ್ಕ್ ಹಾಕಿದೆ. ಅದ್ಹೇಗೆ ಇಲ್ಲಿಯ ಮನೆಗಳ ಮೇಲೆ ಕೆಂಪು ಬಣ್ಣದಿಂದ ಎಕ್ಸ್ ಮಾರ್ಕ್ ಹಾಕಿದಿಯೋ ಏನೋ. ಆದರೆ ಈ ಕುರಿತು ಹತ್ತು ಹಲವು ಮನೆಗಳ ಮೇಲಿನ ಎಕ್ಸ್ ಮಾರ್ಕ್ ಪೋಟೋ ವೈರಲ್ ಆಗಿವೆ.
ಉಕ್ರೇನ್‌ನ ರಿವ್ನ್ ನಗರದ ಮೇಯರ್ ಒಲೆಸ್ಕಂದರ್,ರಷ್ಯಾದ ಈ ಕೃತ್ಯವನ್ನ ತೀವ್ರವಾಗಿಯೇ ಖಂಡಿಸಿದ್ದಾರೆ. ಈ ರೀತಿಯ ಮಾರ್ಕ್ ಗಳು ಕಂಡು ಬಂದರೇ ನಮಗೆ ತಿಳಿಸಿ ಅಂತಲೂ ಜನರಲ್ಲಿ ಮನವಿ ಮಾಡಿದ್ದಾರೆ.
PublicNext
01/03/2022 07:01 pm