ನವದೆಹಲಿ: ಮೈಕ್ರೋಸಾಫ್ಟ್ ಕಾರ್ಪೊರೇಷನ್ ನೀಡಿರುವ ಮಾಹಿತಿ ಪ್ರಕಾರ, ಸಿಇಒ ಸತ್ಯ ನಾಡೆಲ್ಲ ಮತ್ತು ಅನು ಅವರ ಮಗ ಝೈನ್ (26) ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಝೈನ್ ಅವರಿಗೆ ಹುಟ್ಟುವಾಗಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆ ಇತ್ತು.
ತನ್ನ ಸಿಬ್ಬಂದಿಗೆ ಇಮೇಲ್ ಮೂಲಕ ಝೈನ್ ನಿಧನದ ಬಗ್ಗೆ ಮೈಕ್ರೋಸಾಫ್ಟ್ ಮಾಹಿತಿ ನೀಡಿದೆ. ಈ ದುಃಖವನ್ನು ಭರಿಸುವುದಕ್ಕೆ ಕುಟುಂಬದ ಆಲೋಚನೆ ಮತ್ತು ಪ್ರಾರ್ಥನೆಗೆ ಖಾಸಗಿತನದ ಅವಶ್ಯಕತೆ ಇದ್ದು, ಅದಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.
2014ರಲ್ಲಿ ಸತ್ಯ ನಾಡೆಲ್ಲ ಮೈಕ್ರೋಸಾಫ್ಟ್ನ ಸಿಇಒ ಹುದ್ದೆಯನ್ನು ಅಲಂಕರಿಸಿದ್ದರು. ಆಗಿನಿಂದಲೂ ವೈಕಲ್ಯ ಇರುವಂಥ ಬಳಕೆದಾರರಿಗೆ ಅನುಕೂಲ ಆಗುವಂತೆ ಉತ್ಪನ್ನಗಳನ್ನು ರೂಪಿಸುವುದಕ್ಕೆ ಕಂಪೆನಿಯು ಗಮನ ಕೇಂದ್ರೀಕರಿಸಿತ್ತು. ತಮ್ಮ ಮಗ ಝೈನ್ ಬೆಳವಣಿಗೆ ಹಾಗೂ ಅಗತ್ಯ ಇರುವ ಬೆಂಬಲವನ್ನು ನೀಡಲು ಏನು ಬೇಕೋ ಅದನ್ನು ನೀಡುವುದನ್ನು ಕಲಿತಿದ್ದರು.
ಕಳೆದ ವರ್ಷ, ಝೈನ್ ಹೆಚ್ಚಿನ ಚಿಕಿತ್ಸೆಯ ಬಳಿಕ, ಸಿಯಾಟಲ್ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೈನ್ ರಿಸರ್ಚ್ ನ ಭಾಗವಾಗಿ, ಪೀಡಿಯಾಟ್ರಿಕ್ ನ್ಯೂರೋಸೈನ್ಸ್ ನಲ್ಲಿ ಎಗ್ಯುಂಟೆಡ್ ಚೇರ್ ಅನ್ನು ಅಭಿವೃದ್ಧಿಪಡಿಸಿದ್ದರು.
PublicNext
01/03/2022 06:14 pm