ಹಾವೇರಿ: ರಷ್ಯಾ ಹಾಗೂ ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಬೆಳಿಗ್ಗೆ ನಡೆದ ಶೆಲ್ ದಾಳಿಯಲ್ಲಿ ಕನ್ನಡಿಗ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ ವ್ಯಕ್ತಿ ಹಾವೇರಿ ಜಿಲ್ಲೆಯ ಚಳಗೇರಿಯ ನವೀನ ಗ್ಯಾನ ಗೌಡ್ರ ಎಂದು ತಿಳಿದುಬಂದಿದೆ.
ಶೆಲ್ ಬಾಂಬ್ ದಾಳಿಯಲ್ಲಿ ರಷ್ಯಾದ ಸೇನೆಯು ಕಟ್ಟಡ ದ್ವಂಸ ಮಾಡಿದ್ದು,ಕಟ್ಟಡದ ಬಳಿ ಇದ್ದ ಮೆಡಿಕಲ್ ವಿದ್ಯಾರ್ಥಿ ದುರ್ಮರಣ ಹೊಂದಿದ್ದಾನೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ವಿದ್ಯಾರ್ಥಿ ಸಾವನ್ನಪ್ಪಿದ್ದು, ನವೀನ್ ಗ್ಯಾನಗೌಡ್ರ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾಗಿದ್ದಾನೆ.
ಇನ್ನೂ ಭಾರತೀಯ ರಾಯಭಾರಿ ಕಚೇರಿಯ ಜೊತೆ ಮಾತುಕತೆ ನಡೆಸಿದ ಮೃತನ ಸಹೋದರ, ಈ ವೇಳೆ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಯಭಾರಿ ಕಚೇರಿ ಸಿಬ್ಬಂದಿ ಜೊತೆ ಮಾತನಾಡಿದ ಮೃತನ ಸಹೋದರ ಆಡಿಯೋ ಬಿಡುಗಡೆಯಾಗಿದ್ದು, ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ.
PublicNext
01/03/2022 04:34 pm