ಬೆಂಗಳೂರು : ರಷ್ಯಾ- ಉಕ್ರೇನ್ ಯುದ್ಧ ಭಯಾನಕ ತಿರುವು ಪಡೆದುಕೊಳ್ಳುತ್ತಿರು ಮಧ್ಯೆಯೇ ಭಾರತೀಯ ರಾಯಭಾರಿ ಕಛೇರಿ ಶೀಘ್ರ ಉಕ್ರೇನ್ ರಾಜಧಾನಿ ಕೀವ್ ತೊರೆಯುವಂತೆ ಭಾರತೀಯರಿಗೆ ಸೂಚನೆ ನೀಡಿದೆ.
ಯುದ್ಧ ಆರಂಭವಾಗಿ 6ನೇ ದಿನ ಆರಂಭವಾಗಿದೆ. ಒಂದು ಕಡೆ ಭಾರತೀಯರ ಏರ್ಲಿಫ್ಟ್ ನಡೆಯುತ್ತಿದೆ. ಮತ್ತೊಂದು ಕಡೆ ಕೀವ್ ನಗರದಲ್ಲಿ ರಷ್ಯಾದ ಬಾಂಬ್ ದಾಳಿ ಸಹ ತೀವ್ರಗೊಂಡಿದೆ. ಉಕ್ರೇನ್ ನ ಕೀವ್ ನಗರದಲ್ಲಿನ ರಾಯಭಾರಿ ಮತ್ತು ಗೌರ್ನರ್ ಜಚೇರಿ ಬಳಿ ಬಾಂಬ್ ದಾಳಿ ತೀವ್ರಗೊಂಡಿದೆ.
ಈ ಹಿನ್ನಲೆಯಲ್ಲಿ ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ. ಆದಷ್ಟು ಬೇಗ ಭಾರತೀಯರು ಕೀವ್ ನಗರವನ್ನು ತೊರೆಯಿರಿ. ಸಂಚಾರಕ್ಕೆ ಸಿಗುವ ರೈಲು ಮತ್ತು ಇತರೆ ವಾಹನ ಸೌಲಭ್ಯಗಳ ಮೂಲಕ ಕೀವ್ ತೊರೆಯಬೇಕು ಎಂದಿದೆ. ನೆನ್ನೆಯಷ್ಟೆ ಬಲಾರಸ್ ನಲ್ಲಿ ನಡೆದಿದ್ದ ಮಾತುಕತೆ ಫಲಪ್ರದವಾಗದ ಹಿನ್ನಲೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ದಾತಂಕ ಹೆಚ್ಚುತ್ತಲೇ ಇದೆ.
ಆದಷ್ಟು ಬೇಗ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ಮೂಲದವರು ಮತ್ತು ಕನ್ನಡಿಗರು ಸುರಕ್ಷಿತವಾಗಿ ಭಾರತ ,ಕರ್ನಾಟಕಕ್ಕೆ ವಾಪಸ್ಸಾಗಲಿ ಎನ್ನುವುದೇ ನಮ್ಮ ಆಶಯ.
PublicNext
01/03/2022 01:34 pm