ವಾಷಿಂಗ್ಟನ್: ಉಕ್ರೇನ್ ಮೇಲೆ ನಿರಂತರ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇನ್ನು ಅಮೆರಿಕನ್ನರು ಕೂಡ ರಷ್ಯಾ ಮೇಲೆ ಕೆಂಡ ಕಾರುತ್ತಿದ್ದಾರೆ. ರಷ್ಯಾ ಉತ್ಪಾದಿತ ದುಬಾರಿ ವೋಡ್ಕಾ ಮದ್ಯವನ್ನು ಚರಂಡಿಗೆ ಸುರಿದು ಪ್ರತಿಭಟಿಸುತ್ತಿದ್ದಾರೆ. ಅಮೆರಿಕದ ಲಾಸ್ ವೆಗಾಸ್ ಮದ್ಯ ಪ್ರಿಯರು ದುಬಾರಿ ರಷ್ಯನ್ ವೋಡ್ಕಾ ಖರೀದಿಸಿ ಚರಂಡಿಗೆ ಚೆಲ್ಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿದೆ. ಉಕ್ರೇನ್ ಮೇಲಿನ ದಾಳಿಯನ್ನು ಕೆನಡಾ ಕೂಡ ಖಂಡಿಸಿದ್ದು ರಷ್ಯಾ ಉತ್ಪಾದಿತ ವೋಡ್ಕಾ ಖರೀದಿ ನಿಲ್ಲಿಸುವುದಾಗಿ ಹೇಳಿದೆ.
PublicNext
01/03/2022 10:58 am