ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಣರಂಗದಲ್ಲಿ ಸಲಗನಂತೆ ನುಗ್ಗಿ ಯುದ್ಧ ಟ್ಯಾಂಕರ್ ತಡೆದ ದೇಶಪ್ರೇಮಿ: ವಿಡಿಯೋ ವೈರಲ್

ರಷ್ಯಾ ನಡೆಸುತ್ತಿರುವ ಭೀಕರ ದಾಳಿಗೆ ಉಕ್ರೇನ್ ತತ್ತರಿಸಿ ಹೋಗಿದೆ. ಅಲ್ಲಿನ ಸಾಮಾನ್ಯರ ಪಾಡು ಹೇಳತೀರದಾಗಿದೆ‌. ಒಬ್ಬೊಬ್ಬರದು ಒಂದೊಂದು ಘನಘೋರ ಕತೆ ಎಂಬಂತಾಗಿದೆ.

ಈ ನಡುವೆ ಶಸ್ತ್ರಸಜ್ಜಿತ ಸೈನ್ಯವನ್ನು ಕೆಲವರು ಏಕಾಂಗಿಯಾಗಿ ಎದುರಿಸುತ್ತಿರುವ ಕೆಲವು ವಿಡಿಯೋಗಳು ವೈರಲ್ ಆಗುತ್ತಿವೆ. ಅಂತದ್ದರಲ್ಲಿ ಅಪರೂಪ ಎನ್ನಬಹುದಾದ ವಿಡಿಯೋ ಒಂದು ಇಲ್ಲಿದೆ. ಯುದ್ಧ ಟ್ಯಾಂಕರ್ ಬರುತ್ತಿರೋದನ್ನು ಗಮನಿಸಿದ ಉಕ್ರೇನ್ ಪ್ರಜೆಯೊಬ್ಬ ಅದರ ಮೇಲೆರಗಿದ್ದಾ‌ನೆ. ನಂತರ ಮೇಲಿಂದ ಜಿಗಿದು ತನ್ನ ಎರಡೂ ಕೈಗಳಿಂದ ಯುದ್ಧ ಟ್ಯಾಂಕರ್‌ಅನ್ನು ತಡೆಯಲು ಯತ್ನಿಸಿದ್ದಾನೆ. ಹಾಗೂ ಅದರ ಮುಂದೆ ಮಂಡಿಯೂರಿ ಕುಳಿತು ಒಳನುಗ್ಗದಂತೆ ವಿನಮ್ರನಾಗಿ ಮನವಿ ಮಾಡಿದ್ದಾರೆ.

ಎಂತವರ ಹೃದಯವನ್ನು ಕಲಕಿಸುವ ಈ ಘಟನೆಯ ವಿಡಿಯೋ ವೈರಲ್ ಅಗುತ್ತಿದ್ದು ನೋಡಿದವರು ಮರುಗುತ್ತಿದ್ದಾರೆ.

Edited By : Shivu K
PublicNext

PublicNext

28/02/2022 02:04 pm

Cinque Terre

58.02 K

Cinque Terre

0

ಸಂಬಂಧಿತ ಸುದ್ದಿ