ಕೈವ್: ಉಕ್ರೇನ್ ರಾಜಧಾನಿ ಸದ್ಯ ರಷ್ಯಾ ಮಿಲಿಟರಿಯ ಸುಪರ್ದಿಯಲ್ಲಿದೆ. ಪರಿಸ್ಥಿತಿ ನಿಯಂತ್ರಿಸದೇ ಉಕ್ರೇನ್ ಹೆಣಗಾಡುತ್ತಿದೆ. ಈ ನಡುವೆ ಅಲ್ಲಿನ ಸೈನಿಕರೊಬ್ಬರು ರಷ್ಯಾ ಪಡೆ ತನ್ನ ದೇಶವನ್ನು ಪ್ರವೇಶಿಸದಂತೆ ಉಕ್ರೇನ್ ಭೂಭಾಗಕ್ಕೆ ಸಂಪರ್ಕ ಒದಗಿಸುವ ಸೇತುವೆಯನ್ನು ಸ್ಪೋಟಿಸಿದ್ದಾರೆ. ಹಾಗೂ ಘಟನೆಯಲ್ಲಿ ಹುತಾತ್ಮರಾಗಿದ್ದಾರೆ.
ಉಕ್ರೇನಿಯನ್ ಮಿಲಿಟರಿಯ ಹೇಳಿಕೆಗಳ ಪ್ರಕಾರ ರಷ್ಯಾದ ಟ್ಯಾಂಕರ್ಗಳು ಆಕ್ರಮಣ ಮಾಡಿದಾಗ ಮೆರೈನ್ ಬೆಟಾಲಿಯನ್ ಎಂಜಿನಿಯರ್ ಆಗಿದ್ದ ವಿಟಾಲಿ ಸ್ಕಕುನ್ ವೊಲೊಡಿಮಿರೊವಿಚ್ ಅವರನ್ನು ದಕ್ಷಿಣ ಪ್ರಾಂತ್ಯದ ಖೆರ್ಸನ್‌ನಲ್ಲಿರುವ ಹೆನಿಚೆಸ್ಕ್ ಸೇತುವೆಗೆ ನಿಯೋಜಿಸಲಾಯಿತು. ರಷ್ಯಾದ ಟ್ಯಾಂಕ್‌ಗಳನ್ನು ತಡೆಯುವ ಏಕೈಕ ಮಾರ್ಗವೆಂದರೆ ಸೇತುವೆಯನ್ನು ಸ್ಫೋಟಿಸುವುದು ಎಂದು ಸೈನ್ಯವು ನಿರ್ಧರಿಸಿದೆ. ಅದರಂತೆ, ವೊಲೊಡಿಮಿರೊವಿಚ್ ಈ ಕಾರ್ಯವನ್ನು ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದರು ಎಂದು ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
PublicNext
27/02/2022 03:13 pm