ಕೈವ್: ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ರಷ್ಯಾ ಹ್ಯಾಕರ್ಸ್ ಇದೀಗ ಉಕ್ರೇನ್ ಮೇಲೆ ಸೈಬರ್ ದಾಳಿ ಕೂಡ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸೈಬರ್ ದಾಳಿಗೆ ಸಂಬಂಧಿಸಿದ ಸಾಕ್ಷಿ ಎಂಬಂತೆ ಉಕ್ರೇನ್, ಬ್ಯಾಂಕಿಂಗ್ ವೆಬ್‌ಸೈಟ್‌ಗಳು, ಸರ್ಕಾರಿ ಇಲಾಖೆಗಳು ಮೇಲೆ ಸೈಬರ್ ದಾಳಿ ನಡೆದಿದೆ. ಜೊತೆಗೆ ರಷ್ಯಾ ಬೆಂಬಲಿತ ಬರಹಗಳನ್ನು ಹ್ಯಾಕರ್ಸ್ಗಳು ಅಳವಡಿಸಿದ್ದಾರೆ ಎಂದು ವರದಿಗಳಾಗಿವೆ.
ಈ ಹ್ಯಾಕಿಂಗ್ ಕಾರ್ಯಾಚರಣೆಗಳ ಪರಿಣಾಮ ಹಲವಾರು ಇಲಾಖೆಗಳ ವೆಬ್‌ಸೈಟ್‌ಗಳು ಡೌನ್ ಆಗಿವೆ. ಜೊತೆಗೆ ಇನ್ನು ಕೆಲವು ವೆಬ್‌ಸೈಟ್‌ಗಳು ಲೋಡ್ ಆಗುತ್ತಿಲ್ಲ ಎನ್ನಲಾಗಿದೆ. ಈ ಹ್ಯಾಕಿಂಗ್ನ ಹಿಂದೆ ವ್ಯವಸ್ಥಿತವಾದ ಪರಿಣಿತ ತಂಡವೊಂದು ಕೆಲಸ ಮಾಡುತ್ತಿದೆ ಎಂದು ಉಕ್ರೇನ್ ಸೈಬರ್ ಸೆಲ್ನ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
PublicNext
25/02/2022 07:09 am