ಮಾಸ್ಕೋ: ರಷ್ಯಾ- ಉಕ್ರೇನ್ ಯುದ್ಧ ಅಕ್ಷರಶಃ ಆರಂಭವಾಗಿದ್ದು, ರಷ್ಯಾ ಸೇನೆಯು ಈಗಾಗಲೇ ಉಕ್ರೇನ್ ರಾಜಧಾನಿ ಕೈವ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈ ದಾಳಿಯ ತೀವ್ರತೆ ಹಿನ್ನೆಲೆಯಲ್ಲಿ ಉಕ್ರೇನ್ ಸೇನಾಡಳಿತವನ್ನು ಘೋಷಣೆ ಮಾಡಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ ಕೆಲವೇ ಸಮಯದಲ್ಲಿ ಉಕ್ರೇನ್‌ನ ಕೈವ್ ಮತ್ತು ಖಾರ್ಕಿವ್‌ನಲ್ಲಿ ಸ್ಫೋಟಗಳು ಕೇಳಿಬಂದಿವೆ. ಪರಿಣಾಮ ಉಕ್ರೇನ್‌ನಲ್ಲಿ ವಿಮಾನ ಸಂಚಾರ ಸ್ಥಗಿತವಾಗಿದ್ದು, ಯುದ್ಧದ ತೀವ್ರತೆ ಹೆಚ್ಚಾಗಿದೆ. ಇದುವರೆಗೂ 10 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ರಷ್ಯಾ ದಾಳಿಯ ಬೆನ್ನಲ್ಲೇ ಇಡೀ ದೇಶವನ್ನು ಸೇನಾಡಳಿತಕ್ಕೆ ಒಪ್ಪಿಸಿರುವುದಾಗಿ ಅಲ್ಲಿನ ಉಕ್ರೇನ್‌ನ ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜೊತೆಗೆ ದಾಳಿಯನ್ನು ನಿಲ್ಲಿಸಲು ರಷ್ಯಾಗೆ ಸೂಚನೆ ನೀಡುವಂತೆ ಉಕ್ರೇನ್ ವಿಶ್ವಸಂಸ್ಥೆಗೆ ಒತ್ತಾಯಿಸಿದೆ. ಆದರೆ ದಾಳಿಯನ್ನು ಮುಂದುವರಿಸಿರುವ ರಷ್ಯಾ, ತನ್ನ ದಾಳಿ ಉಕ್ರೇನಿಯನರ ಮೇಲಲ್ಲ, ಬದಲಾಗಿ ಮಿಲಿಟರಿ ಸ್ಥಾಪನೆಗಳ ಮೇಲಷ್ಟೇ ಎಂದಿದೆ.
PublicNext
24/02/2022 11:08 am