ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

35 ವರ್ಷವಾದರೂ ಡೈಪರ್ ಹಾಕೋದು ಬಿಟ್ಟಿಲ್ಲ… ಡೈಪರ್ ಡೈನಮೋ

ಮಕ್ಕಳಿಗೆ ಡೈಪರ್ ಹಾಕುವುದು ಸಾಮಾನ್ಯ ಆದ್ರೆ ಇಲ್ಲೊಬ್ಬ ವ್ಯಕ್ತಿಗೆ 35 ವರ್ಷವಾದ್ರು ನಿತ್ಯ ಡೈಪರ್ ಬಳಸುತ್ತಾರೆ. ಹಾಗಾಗಿಯೇ ಇವರು ‘ಡೈಪರ್ ಡೈನಮೋ’ ಎಂದೇ ಫೇಮಸ್ ಆಗಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಈ ವಯಸ್ಸಿನಲ್ಲಿ ಡೈಪರ್ ಬಳಸಲು ಒಂದು ಮಹತ್ತರವಾದ ಕಾರಣವಿದೆ. ಅಮೆರಿಕದ ಮಾರ್ಕ್ ಸ್ಪಾಗಾನುಲೊ ಎಂಬ ಡೈಪರ್ ಹಾಕಿಕೊಂಡು ತಿರುಗಾಡುವ ಬಗ್ಗೆ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

ವಾಸ್ತವವಾಗಿ, ಮಾರ್ಕ್ ಕರುಳಿನ ಚಲನೆಯ ಮೇಲೆ ಅಸಂಯಮದ ನೋವನ್ನು ಹೊಂದಿದ್ದಾರೆ. ನರರೋಗ ಆವರಿಗಿದೆ. ಇದು ಒಂದು ರೀತಿಯ ಮೆದುಳಿನ ನರಗಳ ಸ್ಥಿತಿಯಾಗಿದ್ದು, ಇದರಲ್ಲಿ ಗಾಳಿಗುಳ್ಳೆ ಮತ್ತು ಕರುಳು ತುಂಬಿದೆ ಮತ್ತು ಅವರಿಗೆ ಯಾವಾಗ ಶೌಚಾಲಯವನ್ನು ಬಳಸಬೇಕಾಗುತ್ತದೆ ಎಂಬ ಸಂಕೇತವನ್ನು ಮೆದುಳು ಸ್ವೀಕರಿಸುವುದಿಲ್ಲ.

ಸಾಮಾನ್ಯವಾಗಿ ಜನರಿಗೆ ಶೌಚಾಲಯಕ್ಕೆ ಹೋಗಬೇಕು ಎಂಬ ಭಾವನೆ ಬರುತ್ತದೆ, ಆದರೆ ಮಾರ್ಕ್ ಗೆ ಇದಾವುದು ಗೊತ್ತಾಗುವುದಿಲ್ಲ ಮತ್ತು ಅವರು ಯಾವಾಗ ಬೇಕಾದರು ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದಾಗಿ ಅವರು ಡೈಪರ್ ಗಳನ್ನು ಧರಿಸುತ್ತಾರೆ. ಮುಜುಗರದಿಂದ ರಕ್ಷಿಸಿಕೊಳ್ಳುತ್ತಾನೆ.

ಮಾರ್ಕ್ ಅವರು ಪ್ರಾರಂಭದಲ್ಲಿ ತುಂಬಾ ಮುಜುಗರಕ್ಕೊಳಗಾಗಿದ್ದರು. ಕ್ರಮೇಣ ಈ ವಿಚಾರ ಎಲ್ಲರಿಗೂ ಗೊತ್ತಾಯಿತು. ಈಗ ಅದರ ಬಗ್ಗೆ ಮುಜುಗರಕ್ಕೆ ಒಳಗಾಗದೆ ಎಲ್ಲರೊಂದಿಗೆ ಈ ವಿಚಾರವನ್ನು ಹಂಚಿಕೊಳ್ಳುತ್ತಾರೆ. ತನಗಿರುವ ಸಂಕಷ್ಟದ ಜೊತೆಗೆ ಇತರರಿಗೂ ಅರಿವು ಮೂಡಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

24/01/2022 08:46 pm

Cinque Terre

51 K

Cinque Terre

2

ಸಂಬಂಧಿತ ಸುದ್ದಿ