ಕಾಬೂಲ್:ತಾಲಿಬಾನ್ ಸೇನೆ ಈಗ ಮತ್ತೊಂದು ಯುದ್ಧಕ್ಕೆ ಸಜ್ಜಾದಂತಿದೆ.ಅದಕ್ಕೆ ಸಾಕ್ಷಿ ಎಂಬಂತೆ ತಾಲಿಬಾನ್ ತನ್ನ ಸೇನೆಯಲ್ಲಿ ಆತ್ಮಾಹುತಿ ಬಾಂಬರ್‌ಗಳ ನೇಮಕಕ್ಕೆ ಮುಂದಾಗಿದೆ.
ಹೌದು.ಈಗ ಇದೇ ಸುದ್ದಿ ಎಲ್ಲರಲ್ಲೂ ಆತಂಕ ಮೂಡಿಸುತ್ತಿದೆ. ಅಫ್ಘಾನಿಸ್ತಾನ್ ಮೇಲೆ ದಾಳಿ ವಶಪಡಿಸಿಕೊಂಡಿರೋ ತಾಲಿಬಾನ್, ಇದರ ರಕ್ಷಣೆಗೆ ಈಗ ಆತ್ಮಾಹುತಿ ಬಾಂಬರ್‌ಗಳನ್ನ ನೇಮಕ ಮಾಡಿಕೊಳ್ಳಲು ಮುಂದಾಗಿದೆ.
ದೇಶಾದ್ಯಂತ ಆತ್ಮಾಹುತಿ ಬಾಂಬರ್‌ಗಳನ್ನ ನೇಮಿಸಿಕೊಳ್ಳಲು ತಾಲಿಬಾನ್ ಸೇನೆ ಸಿದ್ಧಗೊಂಡಿದೆ. ಒಂದು ಲಕ್ಷಕ್ಕೂ ಹೆಚ್ಚು ಆತ್ಮಾಹುತಿ ಬಾಂಬರ್‌ಗಳನ್ನ ಸೇನೆಗೆ ಸೇರಿಸಿಕೊಳ್ಳಲು ತಾಲಿಬಾನ್ ಪ್ಲಾನ್ ಮಾಡುತ್ತಿದೆ ಎಂದು ಉಪ ವಕ್ತಾರ ಬಿಲಾಲ್ ಕರಿಮಿ ತಿಳಿಸಿದ್ದಾರೆ.
PublicNext
06/01/2022 05:57 pm