ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಪ್ರಧಾನಿಗೆ ಭೂತಾನ್ ಅತ್ಯುನ್ನತ ನಾಗರಿಕ ಪ್ರಶಸ್ತಿ ಗರಿ

ಭೂತಾನ್: ವಿಶ್ವದಲ್ಲಿಯೇ ತಮ್ಮದೇ ಆದ ಛಾಪು ಮೂಡಿಸಿರುವ ನಮ್ಮ ಪ್ರಧಾನಿ ಮೋದಿ ಅವರಿಗೆ ಭೂತಾನ್ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ ಸಂದಿದೆ.

ಹೌದು ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನ್ಗಡಾಗ್ ಪೆಲ್ ಗಿ ಖೋರ್ಲೋವನ್ನು (Ngadag Pel gi Khorlo) ಈ ಪ್ರಶಸ್ತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅರ್ಹರು. ಅವರಂಥ ಸ್ನೇಹಮಯಿ, ಬೇಷರತ್ ಬೆಂಬಲ ನೀಡುವ ವ್ಯಕ್ತಿಯನ್ನು ನಾವು ನೋಡಿಲ್ಲ. ಇಂಥದ್ದೊಂದು ಅಪರೂಪದ ವ್ಯಕ್ತಿಗೆ ನಮ್ಮ ದೇಶದಿಂದ ಕೊಡುತ್ತಿರುವ ಚಿಕ್ಕ ಕಾಣಿಕೆ ಇದು ಎಂದು ದೇಶದ ಮುಖ್ಯಸ್ಥರಾದ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ ಚುಕ್ ಹೇಳಿದ್ದಾರೆ.

ಕೊರೊನಾ ಸಮಯದಲ್ಲಿ ಮೋದಿಯವರು ನೀಡಿರುವ ಬೆಂಬಲ, ಸ್ನೇಹಪರತೆಗೆ ಈ ಪ್ರಶಸ್ತಿ ನೀಡುತ್ತಿರುವುದಾಗಿ ಭೂತಾನ್ ಹೇಳಿದೆ.

ಮೋದಿಯವರ ಆಡಳಿತದ ಕೋವಿಡ್ -19 ಲಸಿಕೆಗಳ ಉಡುಗೊರೆಯನ್ನು ಸ್ವೀಕರಿಸಿದ ಮೊದಲ ದೇಶ ಭೂತಾನ್. ಆ ಲಸಿಕೆಗಳನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿತ್ತು. ಈ ವರ್ಷದ ಆರಂಭದಲ್ಲಿಯೇ ಭೂತಾನ್, ಭಾರತದಿಂದ 1.5 ಲಕ್ಷ ಡೋಸ್ ಗಳ ಕೋವಿಶೀಲ್ಡ್ ಲಸಿಕೆಯನ್ನು ಉಡುಗೊರೆಯಾಗಿ ಸ್ವೀಕರಿಸಿದೆ.

Edited By : Nirmala Aralikatti
PublicNext

PublicNext

17/12/2021 03:16 pm

Cinque Terre

48.65 K

Cinque Terre

41

ಸಂಬಂಧಿತ ಸುದ್ದಿ