ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಕುನೂರಿನಲ್ಲಿ ಪತನವಾಗಿ 13 ಜನ ಸಾವನ್ನಪ್ಪಿದ ಘಟನೆಯನ್ನು ಚೀನಾ ಗೇಲಿ ಮಾಡುವ ಮೂಲಕ ತನ್ನ ನೀಚತನವನ್ನು ಪ್ರದರ್ಶಿಸಿದೆ.
“ಗ್ಲೋಬಲ್ ಟೈಮ್ಸ್’ ಎಂಬ ಪತ್ರಿಕೆ, “ಜನರಲ್ ರಾವತ್ ಅವರ ಸಾವು, ಭಾರತೀಯ ಪಡೆಗಳಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸಿದೆ. ಇದಲ್ಲದೆ, ಸುಸಜ್ಜಿತ ವ್ಯವಸ್ಥೆಯನ್ನಾಗಲೀ, ಯುದ್ಧಕ್ಕೆ ಬೇಕಾದ ಪೂರ್ವತಯಾರಿಯನ್ನಾಗಲೀ ಆ ದೇಶ ಹೊಂದಿಲ್ಲ ಎಂಬುದನ್ನು ಜ| ರಾವತ್ ಸಾವು ದೃಢೀಕರಿಸಿದೆ.
ರಾವತ್ ಸಾವಿನಿಂದಾಗಿ ಭಾರತದ ಸೇನಾ ಆಧುನೀಕರಣ ಯೋಜನೆಗೆ ದೊಡ್ಡ ಹೊಡೆತ ಬಿದ್ದಿದೆ’ ಎಂದು ಲೇವಡಿ ಮಾಡಿದೆ. ಸೇನಾ ಯಂತ್ರೋಪಕರಣಗಳನ್ನು ಬಳಸುವಲ್ಲಿ ಭಾರತೀಯರು ಅಸಮರ್ಥರು’ ಎಂದಿದೆ.
PublicNext
10/12/2021 07:51 pm