ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಧನ ಟ್ಯಾಂಕರ್ ಸ್ಫೋಟ 91 ಜನರ ದುರ್ಮರಣ

ಸಿಯೆರ್ರಾ ಲಿಯೋನ್: ಇಂಧನ ಟ್ಯಾಂಕರ್ ಸ್ಫೋಟಗೊಂಡು ಸಂಭವಿಸಿದ ಅವಘಡದಲ್ಲಿ ಕನಿಷ್ಠ 91 ಜನ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಇದುವರೆಗೆ ಮೃತರ ಸಂಖ್ಯೆಯನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಸ್ಥಳೀಯ ಅಧಿಕಾರಿಗಳು ಕನಿಷ್ಠ 91 ಶವಗಳನ್ನು ಗುರುತಿಸಿರುವುದನ್ನು ದೃಢಪಡಿಸಿದ್ದಾರೆ.

ಹೌದು ಕಳೆದ ಗುರುವಾರ ಸಿಯೆರ್ರಾ ಲಿಯೋನ್ ನ ರಾಜಧಾನಿ ಫ್ರೀಟೌನ್ ನಲ್ಲಿ ಈ ಅವಘಡ ಸಂಭವಿಸಿದೆ. ಜಖಂಗೊಂಡಿದ್ದ ಟ್ಯಾಂಕರ್ ನಿಂದ ಸೋರಿಕೆಯಾಗುತ್ತಿದ್ದ ಇಂಧನವನ್ನು ಸಂಗ್ರಹಿಸಲು ಮುಗಿಬಿದ್ದಿದ್ದ ಸಾರ್ವಜನಿಕರು ಮೃತರಲ್ಲಿ ಸೇರಿದ್ದಾರೆ ಎಂದು ಅಧಿಕಾರಿ ಮೇರ್ ವೊನ್ನೆ ಅಕಿ ಸಾಯೆರ್ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

‘ಹಲವರು ಗಾಯಗೊಂಡಿದ್ದಾರೆ. ಕೆಲವರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಇದೊಂದು ಭೀಕರ ಅವಘಡ’ ಎಂದು ರಾಷ್ಟ್ರೀಯ ವಿಕೋಪ ನಿರ್ವಹಣಾ ಸಂಸ್ಥೆಯ ಅಧಿಕಾರಿ ಬ್ರಿಮಾ ಬುರೆ ಸೆಸೆ ಪ್ರತಿಕ್ರಿಯಿಸಿದ್ದಾರೆ.

Edited By : Nirmala Aralikatti
PublicNext

PublicNext

06/11/2021 05:41 pm

Cinque Terre

18.41 K

Cinque Terre

0

ಸಂಬಂಧಿತ ಸುದ್ದಿ