ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಸ್ಲಾಂದಿಂದ ಹಿಂದೂ ಧರ್ಮಕ್ಕೆ ಸುಕ್ಮಾವತಿ ಮತಾಂತರ

ಜಕಾರ್ತ: ಅಜ್ಜಿಯ ಚಿಂತನೆ, ಬೋಧನೆಗಳಿಂದ ಪ್ರಭಾವಿತರಾದ ಇಂಡೋನೇಷ್ಯಾದ ಮಾಜಿ ಅಧ್ಯಕ್ಷ ಸುಕರ್ನೊ ಅವರ ಪುತ್ರಿ 69 ವರ್ಷದ ಸುಕ್ಮಾವತಿ ಸುಕರ್ನೊಪುತ್ರಿ ಅವರು ಸ್ವಯಿಚ್ಛೆಯಿಂದ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ.

ಸುಕ್ಮಾವತಿ ಅವರು ಈ ನಿರ್ಧಾರ ಕೈಗೊಳ್ಳುವುದಕ್ಕೆ ಅವರ ಅಜ್ಜಿಯ ಪ್ರಭಾವ ಕಾರಣ ಎಂದು ಅವರು ಹೇಳಿದ್ದಾರೆ.

ಸುಕ್ಮಾವತಿ ಅವರಿಗೆ ಹಿಂದೂ ಧರ್ಮದ ಬಗ್ಗೆ ಆಳವಾದ ಪಾಂಡಿತ್ಯವಿದೆ. 2018ರಲ್ಲಿ ಹಲವು ಇಸ್ಲಾಮಿಕ್ ಸಂಘಟನೆಗಳು ಸುಕ್ಮಾವತಿ ಅವರು ಇಸ್ಲಾಂ ವಿರೋಧಿ ಕವನ ವಾಚಿಸಿದ್ದಾರೆ ಎಂದು ದೂಷಿಸಿದ್ದವು. ಆ ಸಂದರ್ಭದಲ್ಲಿ ಅವರು ತಮ್ಮ ಕವನದಿಂದ ನೋವುಂಟಾಗಿದ್ದಲ್ಲಿ ಕ್ಷಮೆ ಕೂಡಾಕೋರಿದ್ದರು ಎಂದು ಅವರ ಸಹವರ್ತಿಗಳು ಹೇಳಿದ್ದಾರೆ.

ಇಂಡೋನೇಷ್ಯಾದಲ್ಲಿ ಇಸ್ಲಾಂ ಅತಿ ದೊಡ್ಡ ಧರ್ಮವಾಗಿದ್ದು ಇಡೀ ವಿಶ್ವದಲ್ಲೇ ಮುಸ್ಲಿಮರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ದೇಶಗಳಲ್ಲಿ ಮುಂಚೂಣಿಯಲ್ಲಿದೆ.

Edited By : Nirmala Aralikatti
PublicNext

PublicNext

26/10/2021 08:00 am

Cinque Terre

56.37 K

Cinque Terre

13

ಸಂಬಂಧಿತ ಸುದ್ದಿ