ಲಾಸ್ ಏಂಜಲೀಸ್: ಇತ್ತೀಚೆಗಷ್ಟೇ ವಿಶ್ವದ ಅತಿ ಸಿರಿವಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ದಂಪತಿ ವಿಚ್ಛೇದನ ಪಡೆದಿದ್ದರು. ಈ ಬೆನ್ನಲ್ಲೇ ಶತಕೋಟ್ಯಧಿಪತಿ ಎಲಾನ್ ಮಸ್ಕ್ ಹಾಗೂ ಅವರ ಪತ್ನಿ, ಗಾಯಕಿ ಗ್ರಿಮ್ಸ್ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ.
ತಂತ್ರಜ್ಞಾನ ಉದ್ಯಮಿ, ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪೆನಿಗಳ ಮಾಲಿಕ ಎಲಾನ್ ಮಸ್ಕ್ ಹಾಗೂ ಕೆನಡಾದ ಗಾಯಕಿ ಗ್ರಿಮೆಸ್ ಜೊತೆಗಿನ ಮೂರು ವರ್ಷಗಳ ಪ್ರೀತಿಯ ಪಯಣಕ್ಕೆ ಅಂತ್ಯ ಹಾಕಿದ್ದಾರೆ. ಎಲಾನ್ ಮಸ್ಕ್ ಅವರು 2018ರಲ್ಲಿ ಗ್ರಿಮೆಸ್ ಜೊತೆಗಿನ ಪ್ರೀತಿಯನ್ನು ಬಹಿರಂಗ ಪಡಿಸಿದ್ದರು. ಈ ಜೋಡಿಗೆ ಒಂದು ವರ್ಷದ ಗಂಡು ಮಗು ಕೂಡ ಇದೆ. ಇದೀಗ ಪರಸ್ಪರ ಒಪ್ಪಿಗೆಯ ಮೂಲಕ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಶನಿವಾರ ತಮ್ಮ ಬ್ರೇಕಪ್ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಎಲಾನ್, ನಾವು ಇನ್ಮುಂದೆ ಒಟ್ಟಿಗೆ ಇರುವುದಿಲ್ಲ. ಆದರೆ ನಾವಿಬ್ಬರು ನಮ್ಮ ಮಗುವಿಗೆ ಸಹಪೋಷಕರಾಗಿ ಮುಂದುವರೆಯಲಿದ್ದೇವೆ. ನಾವು ಪರಸ್ಪರ ದೂರುವಾದರೂ ನಮ್ಮ ನಡುವಿನ ಪ್ರೀತಿ ಇದೆ ರೀತಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
PublicNext
26/09/2021 02:06 pm