ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನಿಗಳು ಒಂದೊಂದೆ ಕೆಲಸ ಕಾರ್ಯಗಳನ್ನು ಶುರುಮಾಡಿದ್ದಾರೆ. ಸದ್ಯ ಸೆಂಟ್ರಲ್ ಬ್ಯಾಂಕ್ 'ದ ಅಫ್ಘಾನಿಸ್ತಾನ್ ಬ್ಯಾಂಕ್'ಗೆ ತಾಲಿಬಾನಿಗಳು ಹಾಜಿ ಮೊಹ್ಮದ್ ಇದ್ರಿಸ್ ಅವರನ್ನು ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿದೆ.
ಆ ಕುರಿತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಗಮನಿಸುವಂತೆ ಬ್ಯಾಂಕ್ ಕಚೇರಿಯ ಮುಖ್ಯಸ್ಥರ ಜಾಗದಲ್ಲಿಕುಳಿತ ಇದ್ರಿಸ್ ಎದುರಲ್ಲಿ ಲ್ಯಾಪ್ ಟಾಪ್ ಪಕ್ಕದಲ್ಲಿ ಬಂದೂಕು.. ಈ ಚಿತ್ರ ನೋಡಿದ ಬಹುತೇಕರು ಬೆಚ್ಚಿ ಬಿದ್ದಿದ್ದಾರೆ.
ಇತ್ತೀಚೆಗಷ್ಟೇ ಇವರ ಆಯ್ಕೆಯ ಬಗ್ಗೆ ಅನೌನ್ಸ್ ಮಾಡಿದ್ದ ತಾಲಿಬಾನ್ ವಕ್ತಾರ ಝೈಬುಲ್ಲಾ ಮುಜಾಹಿದ್, ಈ ಹಾಜಿ ಮೊಹ್ಮದ್ ಇದ್ರಿಸ್ ಸರ್ಕಾರಿ ಹಣಕಾಸು ಸಂಸ್ಥೆಗಳನ್ನು ಸಂಘಟಿಸುತ್ತಾರೆ. ಬ್ಯಾಕಿಂಗ್ ಕ್ಷೇತ್ರ ಮತ್ತು ಜನರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಹೇಳಿದ್ರು. ಆದ್ರೆ ಈಗ ವೈರಲ್ ಆಗ್ತಿರೋ ಫೋಟೋ ನೋಡಿದ್ರೆ ಅದು ಯಾವ ರೀತಿ ಸಮಸ್ಯೆ ಬಗೆಹರಿಸಬಹುದು ಅನ್ನೋದರ ಬಗ್ಗೆ ಚರ್ಚೆ ಶುರುವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್, ತಾಲಿಬಾನ್ ನ ಕಪ್ಪು ಹಣವನ್ನು ಬಿಳಿ ಮಾಡೋ ಕೆಲಸ ಮಾಡುತ್ತಿದ್ದ ಹಾಜಿ ಮೊಹ್ಮದ್ ಇದ್ರಿಸ್ ರನ್ನು ಸೆಂಟ್ರಲ್ ಬ್ಯಾಂಕ್ಗೆ ಆಯ್ಕೆ ಮಾಡಲಾಗ್ತಿದೆ. ಇವರು ತಾಲಿಬಾನ್ ಮತ್ತು ಉಗ್ರ ಸಂಘಟನೆಗಳ ನಡುವಿನ ಹಣಕಾಸಿ ನ ವ್ಯವಹಾರವನ್ನೂ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
PublicNext
10/09/2021 12:34 pm