ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಲಿಬಾನಿಗಳಿಗೆ ಚೀನಾ ಸಹಾಯ ಹಸ್ತ: 228 ಕೋಟಿ ರೂ. ನೆರವು.. ಅಗತ್ಯ ಸೌಕರ್ಯಗಳ ಆಸರೆ

ಕಾಬೂಲ್ : ತಾಲಿಬಾನ್ ಸರ್ಕಾರ ರಚನೆಯಾದ ಬೆನ್ನಲ್ಲೇ ಚೀನಾ ನೆರವು ನೀಡಲು ಮುಂದಾಗಿದ್ದು, 31 ಮಿಲಿಯನ್ ಡಾಲರ್ (ಸುಮಾರು 228 ಕೋಟಿ ರೂ.) ನೆರವು ಘೋಷಿಸಿದೆ. ಆಹಾರ ಧಾನ್ಯಗಳು, ಲಸಿಕೆ ದಾಸ್ತಾನು ಮತ್ತು ಔಷಧಿಗಳು ಸೇರಿದಂತೆ ತಾಲಿಬಾನ್ ಸರ್ಕಾರಕ್ಕೆ ಅಗತ್ಯ ಇರುವ ಎಲ್ಲಾ ಸೌಕರ್ಯಗಳನ್ನೂ ನೀಡಲಾಗುವುದು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ಜತೆಗೆ ಮೈತ್ರಿ ಚೆನ್ನಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಈ ಹಣಕಾಸಿನ ನೆರವು ನೀಡಲಾಗುತ್ತಿದೆ. ಇದರ ಜತೆಗೆ 30 ಲಕ್ಷದಷ್ಟು ಕೊರೊನಾ ಲಸಿಕೆ ಡೋಸೇಜ್ ಗಳನ್ನು ರವಾನಿಸಲಾಗುತ್ತಿದೆ. ಇದರ ಅಗತ್ಯ ಸದ್ಯ ಅಫ್ಘಾನ್ ಸರ್ಕಾರಕ್ಕೆ ಇದೆ ಎಂದು ವಾಂಗ್ ಯಿ ಮಾಹಿತಿ ನೀಡಿದ್ದಾರೆ. ದಕ್ಷಿಣ ಏಷ್ಯಾದ ರಾಷ್ಟ್ರಗಳೊಂದಿಗೆ ಕಳೆದ ಜುಲೈ ತಿಂಗಳಿನಲ್ಲಿ ಸ್ಥಾಪಿಸಲಾಗಿರುವ ತುರ್ತು ಮೀಸಲು ಅಡಿಯಲ್ಲಿ ಸಂಘರ್ಷಪೀಡಿತ ದೇಶಕ್ಕೆ ಪರಿಹಾರ ನೀಡುವುದು ನಮ್ಮ ಉದ್ದೇಶ. ಇದರ ಅಡಿಯಲ್ಲಿ ಪರಿಹಾರ ನೀಡಲಾಗುತ್ತಿದೆ ಎಂದರು.

Edited By : Nirmala Aralikatti
PublicNext

PublicNext

09/09/2021 02:11 pm

Cinque Terre

27.93 K

Cinque Terre

2

ಸಂಬಂಧಿತ ಸುದ್ದಿ