ಕಾಬೂಲ್: ಆಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ವಶವಾಗಿದ್ದು, ಉಗ್ರರ ಅಟ್ಟಹಾಸ ಮಿತಿಮೀರಿದೆ. ಇತ್ತ ಅಮೆರಿಕ ಅಫ್ಘಾನಿಸ್ತಾನದಿಂದ ಕಾಲ್ಕಿತ್ತ ಬೆನ್ನಲ್ಲೇ ತಾಲಿಬಾನ್‌ಗಳ ಕ್ರೌರ್ಯ ಹೆಚ್ಚಾಗಿದೆ. ಇದೀಗ ಅಮೆರಿಕ ನೆರವು ನೀಡಿದ ಕಾರಣಕ್ಕಾಗಿ ಅಮಾಯಕ ವ್ಯಕ್ತಿಯನ್ನು ಅಮೆರಿಕ ನೀಡಿದ ಹೆಲಿಕಾಪ್ಟರ್‌ಗೆ ಹಗ್ಗ ಕಟ್ಟಿ ನೇಣು ಬಿಗಿದು ಕೊಲ್ಲಲಾಗಿದೆ.
ತಾಲಿಬಾನ್ ಕ್ರೌರ್ಯದ ವಿಡಿಯೋ ವೈರಲ್ ಆಗಿದೆ. ಅಫ್ಘಾನಿಸ್ತಾನದ ಪತ್ರಕರ್ತರು ಈ ವಿಡಿಯೋ ಹಂಚಿಕೊಂಡಿದ್ದಾರೆ. ತಾಲಿಬಾನ್ ವ್ಯಕ್ತಿಯನ್ನು ಸಜೀವವಾಗಿ ಹೆಲಿಕಾಪ್ಟರ್ ಮೂಲಕ ನೇಣು ಬಿಗಿದು ಕೊಂದಿದ್ದಾರೆ ಅಥವಾ ವ್ಯಕ್ತಿಯನ್ನು ಕೊಂದು ಹೆಲಿಕಾಪ್ಟರ್‌ಗೆ ಕಟ್ಟಿ ಕಂದಹಾರ್ ನಗರವನ್ನು ಸುತ್ತಾಡಿದ್ದಾರೋ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
PublicNext
31/08/2021 05:04 pm