ಕಾಬೂಲ್ : ನಂಗಹಾರ್ ಪ್ರ್ಯಾಂತ್ಯದಲ್ಲಿನ ಐಸಿಸ್ -ಖೊರಸಾನ್ ಅಡಗುತಾಣಗಳ ಮೇಲೆ ಅಮೆರಿಕ ದಾಳಿ ಡ್ರೋಣ್ ದಾಳಿ ನಡೆಸಿದೆ. ಕಾಬೂಲ್ ಏರ್ ಪೋರ್ಟ್ ನಲ್ಲಿ ರಕ್ತ ಹರಿಸಿ ಅಮೆರಿಕ ಯೋಧರು ಸೇರಿ 100 ಕ್ಕೂ ಅಧಿಕ ಜನರನ್ನು ಕೊಂದ ಉಗ್ರರಿಗೆ ಅಮೆರಿಕ ತನ್ನ ತಾಕತ್ತು ತೋರಿಸಿದೆ.
ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು ವಾಯಸೇನೆಯಿಂದ ಡ್ರೋನ್ ದಾಳಿ ಮಾಡಿದ ಅಮೆರಿಕಾ 13 ಅಮೆರಿಕ ಯೋಧರ ಸಾವಿಗೆ ಏರ್ ಸ್ಟ್ರೈಕ್ ಮೂಲಕ ಸೇಡು ತೀರಿಸಿಕೊಳ್ಳಲಾಗಿದೆ. ಕಾಬೂಲ್ ಏರ್ಪೋರ್ಟ್ ಬಾಂಬ್ ಬ್ಲಾಸ್ಟ್ ಗೆ 36 ಗಂಟೆಯೊಳಗೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ನಿಂದ ಮಾಹಿತಿ ದೊರೆತಿದೆ.
PublicNext
28/08/2021 08:48 am